ನೂತನ ಸಿಎಂ, ಡಿಸಿಎಂ ಪ್ರಮಾಣವಚನ ಸಂದರ್ಭದಲ್ಲಿ ಸುಳ್ಯದಿಂದ ಮುಖಂಡರು, ಕಾರ್ಯಕರ್ತರು ಭಾಗಿ

0

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ‌ ಸುಳ್ಯದ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ಸಂಭ್ರಮ ಪಟ್ಟರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ‌.ಸಿ.ಜಯರಾಮ, ಸುಳ್ಯ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ‌ ಮಾವಜಿ, ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ‌.ಮುಸ್ತಫ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮುಖಂಡರಾದ ರಾಜೀವಿ ಆರ್ ರೈ, ಸರಸ್ವತಿ ಕಾಮತ್, ಎಸ್.ಸಂಶುದ್ದೀನ್,ಮಹಮ್ಮದ್ ಕುಂಞಿ ಗೂನಡ್ಕ, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಗಫೂರ್ ಕಲ್ಮಡ್ಕ, ವಿಮಲಾ ರಂಗಯ್ಯ, ಹಾಜಿರಾ ಗಫೂರ್ ಕಲ್ಮಡ್ಕ, ಪಿ.ಕೆ. ಅಬೂಸಾಲಿ ಗೂನಡ್ಕ, ಜಿ.ಕೆ.ಹಮೀದ್ ಗೂನಡ್ಕ, ರಹೀಂ ಬೀಜದಕಟ್ಟೆ, ಶೌವಾದ್ ಗೂನಡ್ಕ, ಎಸ್.ಕೆ. ಹನೀಫ, ಕಿರಣ್ ಬುಡ್ಲೆಗುತ್ತು, ಮೂಸಾಕುಂಞಿ ಪೈಂಬೆಚ್ಚಾಲ್, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಶಾಫಿ ಕುತ್ತಮೊಟ್ಟೆ,ಕೀರ್ತನ್ ಕೊಡಪಾಲ, ಫವಾಜ್ ಕನಕಮಜಲು,ರಿಯಾಝ್ ಕಟ್ಟೆಕ್ಕಾರ್, ಮನ್ಸೂರ್ ಮೆಟ್ರೋ,ಅನಿಲ್ ಬಳ್ಳಡ್ಕ, ಶಾಫಿ ಶಾಲೆಕ್ಕಾರ್, ಶೇಖರ ಕಣೆಮರಡ್ಕ, ಸವಾದ್ ಸುಳ್ಯ, ಸಲೀಂ ಪೆರುಂಗೋಡಿ, ಉನೈಸ್ ಮತ್ತಿತರರು ಸೇರಿ ಹಲವು ಮಂದಿ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.