ಖೇಲೋ ಇಂಡಿಯಾ 2023 ವಾಲಿಬಾಲ್ ಟೆಕ್ನಿಕಲ್ ಒಫಿಶಿಯಲ್ ಆಗಿ ಶಿವಕುಮಾರ್ ಎಸ್. ಆಯ್ಕೆ

0

ಮೇ 24 ರಿಂದ ಜೂ. 3 ರ ತನಕ ಲಕ್ನೋದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2023 ರ ವಾಲಿಬಾಲ್ ರಾಷ್ಟ್ರೀಯ ಟೆಕ್ನಿಕಲ್ ಒಫಿಸಿಯಲ್ (ತಿರ್ಪುಗಾರರು) ಆಗಿ ಸುಳ್ಯದ ಕೂಟೇಲ್ ನಿವಾಸಿ, ಮಂಗಳೂರಿನಲ್ಲಿ ಶುಭಂ ಎಲೆಕ್ಟ್ರಾನಿಕ್ಸ್ ನಲ್ಲಿ ರೀಜನಲ್ ಮ್ಯಾನೇಜರ್ ಆಗಿರುವ ಎಸ್.ಶಿವಕುಮಾರ್ ಆಯ್ಕೆಯಾಗಿದ್ದಾರೆ.


ಹಿರಿಯ ವಾಲಿಬಾಲ್ ಕ್ರೀಡಾಪಟುವಾಗಿ ಅಪಾರ ಅನುಭವ ಹೊಂದಿರುವ ಇವರು, ಪ್ರತಿಷ್ಠಿತ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ತೀರ್ಪುಗಾರರಾಗಿದ್ದು, ಹಲವಾರು ಕ್ರೀಡಾಕೂಟಗಳಲ್ಲಿ ಟೆಕ್ನಿಕಲ್ ಒಫಿಶಿಯಲ್ ಆಗಿ ಆಯ್ಕೆಯಾಗಿ ಉತ್ತಮ ತೀರ್ಪು ನೀಡಿದ್ದಾರೆ.