ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ

0

ಇಂದು ರಾತ್ರಿ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವದ ನೇಮೋತ್ಸವ

ಕಾಯರ್ತೋಡಿ ವಿಷ್ಣುನಗರ ಬಳಿಯ ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠ ಬ್ರಹ್ಮಕಲಶ ಕಾರ್ಯಕ್ರಮ ಮೇ.22 ರಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗೆ ಗಣಪತಿಹೋಮ, ಬ್ರಹ್ಮಕಲಶ ಪೂಜೆ ನಡೆದ ಬಳಿಕ ಪ್ರತಿಷ್ಠೆ ಹಾಗೂ ಬಹ್ಮಕಲಶಾಭಿಷೇಕ ನಡೆಯಿತು. ಬಳಿಕ ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಇಂದು ಸಂಜೆ ಶ್ರೀ ರಕ್ತೇಶ್ವರ ದೈವದ ತೊಡಂಙಲ್ ನಡೆದು ಬಳಿಕ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.