ಕಾಯರ್ತೋಡಿ ಸೂರ್ತಿಲ ವಿಷ್ಣುನಗರದ ರಕ್ತೇಶ್ವರೀ ಕ್ಷೇತ್ರದಲ್ಲಿ ಶ್ರೀ ದೈವದ ನೇಮೋತ್ಸವ

0

ಸುಳ್ಯ ಕಸಬಾದ ಕಾಯರ್ತೋಡಿ ಸೂರ್ತಿಲ ವಿಷ್ಣುನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಶ್ರೀ ರಕ್ತೇಶ್ವರೀ ಕ್ಷೇತ್ರದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ಬ್ರಹ್ಮಕಲಶೋತ್ಸವ ನಡೆದು ಅದೇ ದಿನ ರಾತ್ರಿ ಶ್ರೀ ರಕ್ತೇಶ್ವರೀ ದೈವದ ನೇಮೋತ್ಸವ ಜರುಗಿತು.


ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೈವದ ನೇಮೋತ್ಸವ ಕಣ್ತುಂಬಿಕೊಂಡರು. ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಸಂತರ್ಪಣೆಯು ನಡೆಯಿತು.

LEAVE A REPLY

Please enter your comment!
Please enter your name here