ಅರಂತೋಡು _ ತೊಡಿಕಾನ ರಸ್ತೆ ಬದಿ ಅಪಾಯಕಾರಿ ಮರ

0

ಅರಂತೋಡು ತೊಡಿಕಾನ ರಸ್ತೆ ಬದಿಯ ಮರಂಪಗಲ್ಲು ಸಮೀಪ ಬ್ರಹದಾಕಾರದ ಒಣ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ.
ಅರಂತೋಡು ತೊಡಿಕಾನ ರಸ್ತೆ ಮುಖ್ಯವಾಗಿ ಸುಳ್ಯದ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಸಂಪರ್ಕ‌ ಕಲ್ಪಿಸುತ್ತದೆ.ಅಲ್ಲದೆ ತೊಡಿಕಾನ ಗ್ರಾಮದ ವಿವಿಧ ಭಾಗಗಳಿಗೆ ಹಾಗೂ ಕೊಡಗು ಜಿಲ್ಲೆಯ ಚೆಂಬು ಗ್ರಾಮಕ್ಕೆ ಹಾಗೂ ಕೊಡಗು ಜಿಲ್ಲೆಯ ಭಾಗಮಂಡಲ ತಲಕಾವೇರಿಗೆ ಸಂಪರ್ಕ ಕಲ್ಪಿಸುತ್ತದೆ.ಈ ಒಣ ಮರದ ಪಕ್ಕವೇ ವಿದ್ಯುತ್ ಲೈನ್ ಹಾದು ಹೋಗುತ್ತಿದೆ.ಒಣ ಮರ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದರೆ ಇನ್ನಷ್ಟು ಅಪಾಯಕ್ಕೆ ಕಾರಣವಾಗಲಿದೆ.ವಾಹಗಳು ಸಂಚಾರಿಸುವಾಗ ಪಾದಚಾರಿಗಳು ನಡೆದಾಡಿಕೊಂಡು ಹೋಗುವಾಗ ಮರ ಮುರಿದು ಬಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಇದಲ್ಲದೆ ಇತರ ಮರಗಳು ರಸ್ತೆ ಬದಿವಾಲಿಕೊಂಡು ನಿಂತಿವೆ.ಈ ಒಣ ಮರವನ್ನು ತಕ್ಷಣ ತೆರವುಗೊಳಿಬೇಕು ತಪ್ಪಿದಲ್ಲಿ ಜನರಿಗೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತೊಡಿಕಾನ ಗ್ರಾಮದ ಮರಂಪಗಲ್ಲು ಸಮೀಪ ಅರಂತೋಡು ತೊಡಿಕಾನ ರಸ್ತೆ ಬದಿಯಲ್ಲಿ ಒಣ ಬ್ರಹದಾಕರಾದ ಒಣ ಹಾಲೆ ಮರ ಇದೆ ಇದು ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ.ಇದರಿಂದ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಒಣ ಮರವನ್ನು ತಕ್ಷಣ ತೆರವುಗೊಳಿಸಬೇಕು
ಚಂದ್ರಶೇಖರ ಆಚಾರ್ಯ ತೊಡಿಕಾನ

ಅರಂತೋಡು ತೊಡಿಕಾನ ರಸ್ತೆ ಬದಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರವನ್ನು ತೆರವುಗೊಳಿಸಲು ಗ್ರಾಮಸ್ಥರು ಅರಣ್ಯ ಇಲಾಖೆಗೆ ಅರ್ಜಿ ನೀಡಿದರೆ ಮರವನ್ನು ತಕ್ಷಣ ತೆರವುಗೊಳಿಸುವ ವ್ಯವಸ್ಥೆ ಮಾಡುತ್ತೇವೆ.

ಮಂಜುನಾಥ್ ಆರ್.ಎಫ್.ಒ ಸುಳ್ಯ