ಸುಳ್ಯದ ಸನಿಹ ಶೆಟ್ಟಿಗೆ ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ

0

ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಆಂದ್ರಪ್ರದೇಶದ ವಿಶಾಖಪಟ್ಟಣದ ಮಿರಾಕಲ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 8 ನೇ ರಾಷ್ಟ್ರೀಯ ಡ್ಯಾನ್ಸ್ ಚಾಂಪಿಯನ್ ಶಿಪ್ ನಲ್ಲಿ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಸುಳ್ಯದ ಸನಿಹಾ ಶೆಟ್ಟಿ ದ್ವಿತೀಯ ಸ್ಥಾನದೊಂದಿಗೆ‌ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
ಈಕೆ ಸುಳ್ಯದ ಚಂದ್ರಕಾಂತ – ಉಷಾ ಶೆಟ್ಟಿ ದಂಪತಿಯ ಪುತ್ರಿ. ವಿದುಷಿ ಪ್ರಾಂಜಲಿ ಕಾನತ್ತೂರು ಇವರ ಶಿಷ್ಯೆ.‌ರಂಗಮಯೂರಿ ಕಲಾಶಾಲೆಯ ಸುಳ್ಯ ಇದರ ವಿದ್ಯಾರ್ಥಿನಿ.