ಬಾಳುಗೋಡು: ರಸ್ತೆ ಅಗೆದು ತಿಂಗಳೇ ಕಳೆದಿದೆ

0

ಸಂಚಾರಕ್ಕೆ ಸಂಚಕಾರ, ಬಾಳೆಗಿಡ ನೆಟ್ಟು ಪ್ರತಿಭಟನೆ


ಬಾಳುಗೋಡು ಗ್ರಾಮದ ಪೊಯ್ಯೆಗದ್ದೆ ಎಂಬಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ರಸ್ತೆ ಅಗೆದು ತಿಂಗಳು ಕಳೆದರೂ ರಸ್ತೆ ಮಾಡದೆ ಇದ್ದ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದು ಇದನ್ನು ಪ್ರತಿಭಟಿಸಿ ಬಾಳೆ ಗಿಡ ನೆಟ್ಟ ಘಟನೆ ವರದಿಯಾಗಿದೆ.

ಬಾಳುಗೋಡು ಕುಡುಮುಂಡೂರು ಐನೆಕಿದು ರಸ್ತೆಯ ಪೊಯ್ಯೆಗದ್ದೆ ಎಂಬಲ್ಲಿ ಸುಮಾರು ೧೦೦ ಮೀ ರಸ್ತೆ ರಸ್ತೆಯನ್ನು ಅಗೆದು ಮಣ್ಣು ತೆಗೆಯಲಾಗಿದ್ದು ಕಾಂಕ್ರೀಟ್ ಮಾಡುವುದಾಗಿ ಹೇಳಲಾಗಿತ್ತು. ಇದೀಗ ಮಣ್ಣು ತೆಗೆದು ಒಂದೂವರೆ ತಿಂಗಳಾಯ್ತು. ಆದರೆ ರಸ್ತೆ ಕಾಂಕ್ರೀಟಿಕರಣ ನಡೆದಿಲ್ಲ. ಇದೀಗ ಮಳೆಯೂ ಆರಂಭವಾಗಿದ್ದು ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗುತ್ತಿದೆ. ದ್ವಿಚಕ್ರ ವಾಹನ, ಲಘು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ನಡೆದಾಡಲು ಕಷ್ಟ ಪಡುವಂತಾಗಿದೆ.