ಉದ್ಯಮಿ ರಶೀದ್ ಹಾಜಿ ಬೆಳ್ಳಾರೆಗೆ ಡಾಕ್ಟರೇಟ್

0

ಬೆಂಗಳೂರು,ಗೋವಾ ಮತ್ತು ದುಬೈನಲ್ಲಿ ಉದ್ಯಮಿಯಾಗಿರುವ ರಶೀದ್ ಹಾಜಿ ಬೆಳ್ಳಾರೆಯವರಿಗೆ ಜರ್ಮನ್ ಇಂಟರ್ನ್ಯಾಷನಲ್ ಪೀಸ್ ಯುನಿವರ್ಸಿಟಿ ಜರ್ಮನ್ ಇದರ ವತಿಯಿಂದ ಕೊರೊನಾ ಸಂದರ್ಭದಲ್ಲಿ ದುಬೈಯಲ್ಲಿ ನೀಡಿದ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಗೌರವ ಡಾಕ್ಟರೇಟ್ ಬಿರುದ್ದನ್ನು ಮೆ.16 ರಂದು ತಮಿಳುನಾಡಿನ ಊಟಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ‌ಸ್ವಿಕರಿಸಿದರು.
ಕಾರ್ಯಕ್ರಮದಲ್ಲಿ ಯುನಿವರ್ಸಿಟಿ ಯ ಉಪಕುಲಪತಿಗಳಾದ ಡಾ.ಎಸ್ ಚೆಲ್ಲದುರೈ,ನಿರ್ದೇಶಕರಾದ ಚಂಗ್ ರೋಬಿನ್ ರೊಮೈ,ಡಾ.ಸಯ್ಯದ್ ಮಹಮ್ಮದ್ ರಾಫಿ, ವೈಸ್ ಚಯರ್ಮೆನ್ ಸುರೇಶ್ ಬಾಬು
ಮೊದಲಾದವರು ಉಪಸ್ಥಿತರಿದ್ದರು.


ಕೆ ಎಂ ರಶೀದ್ ಹಾಜಿ ಯವರು ಬೆಳ್ಳಾರೆ ದಿ| ಕೆ ಎಂ ಅಬೂಭಕ್ಕರ್ ಹಾಜಿಯವರ ಪುತ್ರ,ಮೂರು ವರ್ಷಗಳ ಕಾಲ ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯ ಆಡಳಿತಾಧಿಕಾರಿ ಸೇವೆಸಲ್ಲಿಸಿದರು.
ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ,ಕೆ.ಎಂ ಫೌಂಡೇಶನ್ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here