ಹತ್ತೂರಿನಲ್ಲಿ ಮನೆಮಾತಾಗಿರುವ ಮಾನಕ ಜ್ಯುವೆಲ್ಸ್‌ನ ನೂತನ ಮಳಿಗೆ ನಾಳೆ ಮುತ್ತಿನ ನಗರಿಯಲ್ಲಿ ಉದ್ಘಾಟನೆ

0


ಪುತ್ತೂರು ಸಹಿತ ಹತ್ತೂರಿನಲ್ಲಿ 18 ವರ್ಷಗಳಿಗೂ ಹೆಚ್ಚು ಕಾಲದಿಂದ ವ್ಯವಹಾರ ನಿರತವಾಗಿ ಜನಪ್ರಿಯವಾಗಿರುವ ಮಾನಕ ಜ್ಯುವೆಲ್ಸ್‌ನ ನೂತನ ಬೃಹತ್ ಜ್ಯುವೆಲ್ಲರಿ ಶೋರೂಮ್ ಮೇ 27ರಂದು ಪುತ್ತೂರು ಮುಖ್ಯರಸ್ತೆಯಲ್ಲಿ ಸಿಪಿಸಿ ಪ್ಲಾಝಾದ ಎದುರು ಉದ್ಘಾಟನೆಗೊಳ್ಳಲಿದೆ. ಆಭರಣ ಮಳಿಗೆಯು ಎರಡು ಅಂತಸ್ತಿನಲ್ಲಿ ಹರಡಿಕೊಂಡಿದ್ದು, ಕೆಳಗಿನ ಅಂತಸ್ತಿನಲ್ಲಿ ಚಿನ್ನಾಭರಣಗಳ ಶೋ ರೂಮ್ ಇದೆ. ಪುತ್ತೂರಿನ ಚಿನ್ನದಂತಹ ಗ್ರಾಹಕರ ಮನಸ್ಸಿಗೆ ಇದೊಂದು ಅತಿ ದೊಡ್ಡ ಜ್ಯುವೆಲ್ಲರಿ ಶೋರೂಮ್ ಆಗಿ ಕಾಣಲಿದೆ. ನೂತನ ಮಳಿಗೆಯಲ್ಲಿ ಗ್ರಾಹಕರಿಗೆ ವಿಪುಲವಾದ ಆಯ್ಕೆ ಮತ್ತು
ಹಲವು ಅನುಕೂಲತೆಗಳನ್ನು ಒದಗಿಸಲಾಗುತ್ತಿದೆ. ಮಳಿಗೆಯಲ್ಲಿ ಬೆಳ್ಳಿಯ ಆಭರಣಗಳಿಗೆ ಪ್ರತ್ಯೇಕ ವಿಭಾಗ ಕೂಡ ಇದೆ. ಇದರ ಜೊತೆಗೆ ವಜ್ರದ ಆಭರಣಗಳು ಕೂಡಾ ಇವೆ.

ಉದ್ಘಾಟನೆಯ ವಿಶೇಷ ಆಫರ್‌ಗಳು: ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ಚಿನ್ನದ ಮೇಲೆ ವಿಶೇಷ ಆಫರ್‌ಗಳನ್ನು ನೀಡಲಾಗಿದೆ. ಮೇ೨೭ರಿಂದ ಜೂನ್ ೩೧ರವರೆಗೆ ರೂ.೧೦೦೦೦ಕ್ಕೂ ಮಿಕ್ಕಿ ಖರೀದಿ ಮೇಲೆ ಕೂಪನ್ ಮೂಲಕ ಬಹುಮಾನ ಘೋಷಿಸಲಾಗಿದೆ. ಕೂಪನ್‌ನಲ್ಲಿ ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನ ವಾಷಿಂಗ್‌ಮೆಷಿನ್, ತೃತೀಯ ಬಹುಮಾನ ಸ್ಮಾರ್ಟ್ ಟಿವಿ ಗ್ರಾಹಕರಿಗೆ ದೊರೆಯಲಿದೆ. ಅಲ್ಲದೆ ಐದು ಆಕರ್ಷಕ ಬಹುಮಾನಗಳು ಲಭ್ಯವಿದೆ. ಯಾವುದೇ ಆಭರಣ ಕೊಂಡರೂ ವೇಸ್ಟೇಜ್ ಅತ್ಯಲ್ಪವಾಗಿದ್ದು, ಇದು ಮಾರುಕಟ್ಟೆಯಲ್ಲಿಯೇ ಅತ್ಯಲ್ಪ ಪ್ರಮಾಣದ ವೇಸ್ಟೇಜ್ ಆಗಿದ್ದು, ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಗ್ರಾಹಕರಿಗೆ ಮಾಸಿಕ 5೦೦, ೧೦೦೦ ಹಾಗೂ 2೦೦೦ ರೂ. ಪಾವತಿಯ ಕಂತುಗಳ ಮೂಲಕ ಚಿನ್ನ ಖರೀದಿಸುವ ಅವಕಾಶವೂ ಇದೆ.

ಸಹೋದರರ ನಗುಮೊಗದ ಸೇವೆ


ಹಲವು ವರ್ಷಗಳ ಹಿಂದೆ ಚಿನ್ನದ ಶುದ್ದೀಕರಣಕ್ಕೆ ತಾಂತ್ರಿಕ ವ್ಯವಸ್ಥೆ ಇಲ್ಲದ ಸಂದರ್ಭ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಶಂಕರ್ ವಿ.ಕೆ ಎಂಬವರು ಸಾಂಪ್ರದಾಯಿಕ ರೀತಿಯಲ್ಲಿ ಚಿನ್ನದ ಶುದ್ದೀಕರಣ ಮಾಡುತ್ತಿದ್ದರು. ಪುತ್ತೂರಿನ ಬಹುತೇಕ ಚಿನ್ನದ ಮಳಿಗೆಗಳು ಅವರನ್ನೇ ಅವಲಂಬಿದ್ದವು.ತಂದೆಯೊಂದಿಗೆ ಮಕ್ಕಳಾದ ಸಿದ್ದನಾಥ್ ಕಂದಾರೆ, ಸಹದೇವ್ ಕಂದಾರೆ ಅವರು ಕೂಡಾ ಕೈ ಜೋಡಿಸಿದ್ದರು. ಕಾಲಕ್ರಮೇಣ ಚಿನ್ನ ಶುದ್ದೀಕರಣಕ್ಕೆ ತಾಂತ್ರಿಕ ವ್ಯವಸ್ಥೆ ಬಂದಾಗ ೨೦೦೫ರಲ್ಲಿ ಸಿದ್ದನಾಥ್ ಕಂದಾರೆ ಸಹೋದರರು ತಂದೆಯ ಮಾರ್ಗದರ್ಶನದಲ್ಲಿ ಪುತ್ತೂರು ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಬಳಿ ತಾಯಿಯ ಹೆಸರಿನಲ್ಲಿ ಮಾನಕ ಜ್ಯುವೆಲ್ಸ್‌ನ್ನು ಆರಂಭಿಸಿದ್ದರು. ತಮ್ಮ ನಗುಮೊಗದ ಸೇವೆಯೊಂದಿಗೆ ಕಾಲಮಿತಿಯಲ್ಲಿ ಗ್ರಾಹಕರ ಇಚ್ಚೆಗೆ ತಕ್ಕಂತೆ ಚಿನ್ನದ ಆಭರಣಗಳನ್ನು ನೀಡುವ ಮೂಲಕ ಗ್ರಾಹಕರ ಮನಗೆದ್ದು ಕೇವಲ ೧೮ ವರ್ಷಗಳಲ್ಲಿ ಅಪಾರ ಗ್ರಾಹಕ ಬಂಧುಗಳ ಪ್ರೀತಿಯನ್ನು ಇವರು ಗಳಿಸಿದ್ದಾರೆ. ಇದೀಗ ಅವರ ಇನ್ನೋರ್ವ ಸಹೋದರ ಸನದ್ ಕುಮಾರ್ ಅವರೂ ಅಣ್ಣಂದಿರೊಂದಿಗೆ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ.

LEAVE A REPLY

Please enter your comment!
Please enter your name here