ಮಲೆಯಾಳ ಹರಿಹರ ಪಲ್ಲತಡ್ಕ ರಸ್ತೆ ಡಾಮರೀಕರಣ ಪ್ರಗತಿಯಲ್ಲಿ

0

ಐದು ಗ್ರಾಮಗಳನ್ನು ಸಂಪರ್ಕಿಸುವ ಬಹು ಬೇಡಿಕೆಯ ರಸ್ತೆ

ಹರಿಹರ ಪಲ್ಲತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳನ್ನು ಒಳಗೊಂಡ ಐದು ಗ್ರಾಮಗಳನ್ನು ಸಂಪರ್ಕಿಸುವ ಮಲೆಯಾಳ ಹರಿಹರ ಪಲ್ಲತಡ್ಕ ರಸ್ತೆ ಡಾಮರೀಕರಣ ಕಾಮಗಾರಿ ನಡೆಯುತಿದ್ದು ಈ ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ.

ಬಹು ಬೇಡಿಕೆ ಯ ಕಾಮಗಾರಿ ಇದಾಗಿದ್ದು ರಾಜಕೀಯವಾಗಿ ಬಹು ಚರ್ಚೆಗೆ ಗ್ರಾಸವಾದರೂ ಈ ಭಾಗದ ಬಿಜೆಪಿ ಮುಖಂಡರ ಒತ್ತಾಯಕ್ಕೆ ಮಣಿದು ಮಾಜಿ ಸಚಿವ ಎಸ್ ಅಂಗಾರ ಅವರು ಅನುದಾನ ಒದಗಿಸಿದ್ದರು.

ಮಲೆಯಾಳದಿಂದ ಹರಿಹರ ಪಲ್ಲತಡ್ಕಕ್ಕೆ 7 ಕಿ.ಮೀ ಇದ್ದರೂ ಕೆಲ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆಯಾಗಿತ್ತು. ಉಳಿದಂತೆ ಇದ್ದ ರಸ್ತೆ ತೀರಾ ಹದ ಗೆಟ್ಟಿತ್ತು. ಇದೀಗ 3. 5 ಕಿ.ಮಿ ರಸ್ತೆ ಡಾಮರೀಕರಣದ ನಡೆಯುತಿದ್ದು ಅದಾದರೆ ಗ್ರಾಮಾಂತರ ರಸ್ತೆಯಾದ ಮಳೆಯಾಲ ಹರಿಹರ ಪಲ್ಲತಡ್ಕ ರಸ್ತೆ ಪೂರ್ಣ ಅಭಿವೃದ್ಧಿಗೊಂಡಂತಾಗಲಿದೆ.

LEAVE A REPLY

Please enter your comment!
Please enter your name here