ಸೋಣಂಗೇರಿ ಬಳಿ ಓಮ್ನಿ ಕಾರು ರಿಕ್ಷಾ ಡಿಕ್ಕಿ, ರಿಕ್ಷಾ ಚಾಲಕನಿಗೆ ಗಾಯ

0

ಸುಳ್ಯ ಸೋಣಂಗೇರಿ ಸಮೀಪ ಮುಖ್ಯ ರಸ್ತೆಯಲ್ಲಿ ಓಮ್ನಿ ಕಾರು ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಆಟೋ ಚಾಲಕನಿಗೆ ಗಾಯವಾದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಐವರ್ನಾಡು ಮೂಲದ ವ್ಯಕ್ತಿಯೋರ್ವರು ತಮ್ಮ ಮಾರುತಿ ಓಮ್ನಿ ಕಾರಿನಲ್ಲಿ ಸುಳ್ಯದತ್ತ ಬರುತ್ತಿದ್ದ ಸಂದರ್ಭ ಸೋಣಗೇರಿ ಅಂಗನವಾಡಿ ಕೇಂದ್ರದ ಬಳಿ ಪೈಚಾರಿನಿಂದ ಸೋಣಂಗೇರಿ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆಯಿತು. ಘಟನೆಯಿಂದ ಆಟೋ ಚಾಲಕ ಸೋಣಗೇರಿ ಮೂಲದ ಕಣ್ಣನ್ ಎಂಬವರಿಗೆ ಹಣೆಭಾಗಕ್ಕೆ ಗಾಯವಾಗಿದ್ದು ಸ್ಥಳೀಯರು ಕೂಡಲೇ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ ಕಾರು ಹಾಗೂ ಆಟೋರಿಕ್ಷಾದ ಮುಂಭಾಗ ಜಖಂಗೊಂಡಿದೆ.