ಗೂನಡ್ಕ ಬಳಿ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ಕಾರು ಡಿಕ್ಕಿ, ಕಾರು ಜಖಂ

0

ಮಾಣಿ ಮೈಸೂರು ಹೆದ್ದಾರಿ ಗೂನಡ್ಕ ಸಮೀಪ ಕೆಎಸ್‌ಆರ್‌ಟಿಸಿ ಬಸ್ಸಿನ ಹಿಂಭಾಗಕ್ಕೆ ಆಲ್ಟೊ ಕಾರು ಡಿಕ್ಕಿ ಸಂಭವಿಸಿ ಕಾರು ಜಖಂಗೊಂಡ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಸುಳ್ಯದಿಂದ ಕೊಯ್ನಾಡು ಕಡೆ ಚಲಿಸುತ್ತಿದ್ದ ಬಸ್ಸಿಗೆ ಅದೇ ದಿಕ್ಕಿನಿಂದ ಬಂದ ಆಲ್ಟೊ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಬಸ್ಸಿನಡಿಗೆ ಸಿಲುಕಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.