ಮೇ 28 -ಜೂ. 4 ;ಸುಳ್ಯದಲ್ಲಿ ಹಿಮಾಲಯ ಧ್ಯಾನ ಯೋಗ ಶಿಬಿರ

0


ಹಿಮಾಲಯ ಧ್ಯಾನ ಯೋಗ ಶಿಬಿರವು ಸುಳ್ಯ ಕಾಂತಮಂಗಲದ ಸಮರ್ಪಣಾ ಧ್ಯಾನ ಮಂದಿರದಲ್ಲಿ ಮೇ 28 ರಿಂದ‌ ಜೂ.4ರವರೆಗೆ ಸಂಜೆ 4ರಿಂದ 6ರವರೆಗೆ ನಡೆಯಲಿದೆ.
ಸಮರ್ಪಣಾ ಧ್ಯಾನ ಪದ್ಧತಿಯು ಒಂದು ಬಹಳ ಸರಳವಾದ ಧ್ಯಾನ ಪದ್ಧತಿಯಾಗಿದೆ. ಇದರಲ್ಲಿ ಯಾವುದೇ ಶಾರೀರಿಕ ಪ್ರಕ್ರಿಯೆಗಳಿಲ್ಲ ಯಾರು ಬೇಕಾದರೂ ಬಹಳ ಸುಲಭವಾಗಿ ಅಭ್ಯಾಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನವು ಬಹಳ ಒತ್ತಡದಿಂದ ಕೂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಂದೆ ಮನುಷ್ಯರನ್ನು ಕಾಡಲಿರುವ ಅತಿ ದೊಡ್ಡ ಸಮಸ್ಯೆ ಖಿನ್ನತೆ(ಡಿಪ್ರೆಷನ್). ಅದಕ್ಕಿರುವ ಅತ್ಯುತ್ತಮ ಪರಿಹಾರ ಧ್ಯಾನ. ಧ್ಯಾನದಿಂದ ಶಾರೀರಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಸಕಾರಾತ್ಮಕ ಪರಿವರ್ತನೆಯುಂಟಾಗುವುದು. ಧ್ಯಾನವು ಮನುಷ್ಯನ ಸುತ್ತ ಒಂದು ಸುರಕ್ಷಾ ಕವಚವನ್ನು ನಿರ್ಮಾಣ ಮಾಡುತ್ತದೆ. ನಮ್ಮ ಹೆಚ್ಚಿನ ಎಲ್ಲಾ ಸಮಸ್ಯೆಗಳೂ ನಮ್ಮ ಪ್ರಭಾವದಲ್ಲಿರುವ ದೋಷದಿಂದಲೇ ಆಗುವುದು. ಧ್ಯಾನದಿಂದ ಪ್ರಭಾವಲಯ ಶುದ್ಧವಾಗುತ್ತಿದ್ದಂತೆ ಸಮಸ್ಯೆಗಳು ದೂರವಾಗತೊಡಗುತ್ತದೆ. ನಕಾರಾತ್ಮಕ ಶಕ್ತಿಗಳು ಹತ್ತಿರ ಬರದಂತೆ ತಡೆಯುತ್ತದೆ. ಬಾಲ್ಯ ಯೌವನಾವಸ್ಥೆಯಲ್ಲಿ ಉತ್ತಮ ಸಂಸ್ಕಾರ ದೊರೆತರೆ ಅವರ ಸಂಪೂರ್ಣ ಭವಿಷ್ಯ ಉಜ್ವಲ.