ಪಂಜ:ಆಹ್ವಾನಿತ ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

0

ಮಿತ್ರ ಮಂಡಲ ನಾಗತೀರ್ಥ
ಇದರ ವತಿಯಿಂದ ಆಹ್ವಾನಿತ ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮೇ.28 ರಂದು ನಡೆಯಿತು.


ಪಂಜ. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಉದ್ಘಾಟಿಸಿ ಶುಭಹಾರೈಸಿದರು. ಮಿತ್ರ ಮಂಡಲದ ಅಧ್ಯಕ್ಷ
ನಿತಿನ್ ನಾಗತೀರ್ಥ ಸಭಾಧ್ಯಕ್ಷತೆ ವಹಿಸಿದ್ದರು. ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಕತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪಂದ್ಯಾಟದಲ್ಲಿ 14 ತಂಡಗಳು ಪಾಲ್ಗೊಂಡಿತ್ತು. ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಿತ್ರ ಮಂಡಲದ ಸ್ಥಾಪಕಾಧ್ಯಕ್ಷ ಕೆಂಚಪ್ಪ ಗೌಡ ,ಸಂದೀಪ್ ಪಲ್ಲೋಡಿ, ಪುರುಷೋತ್ತಮ ನಾಗತೀರ್ಥ, ಚಂದ್ರಶೇಖರ ಕರಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಾಕೂಟದ ಪ್ರಥಮ ಸ್ಥಾನವನ್ನು ಆರ್ಶೀವಾದ್ ಅಲೆಕ್ಕಾಡಿ, ದ್ವಿತೀಯ ಸ್ಥಾನವನ್ನು ಚಕ್ರವರ್ತಿ ಅಲೆಕ್ಕಾಡಿ,‌ ಸರಣಿ ಶ್ರೇಷ್ಠ ಸನತ್ ನರ್ಲಡ್ಕ, ಉತ್ತಮ ದಾಂಡಿಗ ಸುದೇಶ್, ಉತ್ತಮ ಎಸೆತಗಾರ ಅನುರಾಜ್ ಅಲೆಕ್ಕಾಡಿ, ಪೈನಲ್ ಪಂದ್ಯಾಟದ ಪಂದ್ಯ ಶೇಷ್ಠ ಸನತ್ ನರ್ಲಡ್ಕ, ಉತ್ತಮ ಕ್ಷೇತ್ರ ರಕ್ಷಕ ಚೇತನ್ ಪಡೆದುಕೊಂಡರು.

LEAVE A REPLY

Please enter your comment!
Please enter your name here