ಕಾಂಕ್ರೀಟ್ ಗೊಂಡ ಕೊರತ್ತೋಡಿ – ‌ಬೊಳ್ಳಾಜೆ ರಸ್ತೆಯಲ್ಲಿ ಉದ್ಘಾಟನೆಗೆ ಮೊದಲೇ ಬಿರುಕು

0

ಕಳಪೆ ಕಾಮಗಾರಿಯ ಬಗ್ಗೆ ಊರವರ ಸಂಶಯ

ನಿರ್ಮಿತಿ ಕೇಂದ್ರದಿಂದ ಮಾಡಿದ ಬೊಳ್ಳಾಜೆ ರಂಗಮಂದಿರದ ಸ್ಥಿತಿ ರಸ್ತೆಗೂ ಬಂತೆ?

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ ಬೊಳ್ಳಾಜೆ ರಸ್ತೆ ಕೆಲ ದಿನಗಳ ಹಿಂದೆ ಕಾಂಕ್ರೀಟೀಕರಣ ಗೊಂಡಿದ್ದು, ಉದ್ಘಾಟನೆಗೆ ಮೊದಲೇ ರಸ್ತೆ ಬಿರುಕು ಬಿಟ್ಟಿದೆ. ಇದು ಕಳಪೆ ಕಾಮಗಾರಿಯಾಗಿದೆ ಎಂದು ಊರವರು ಆರೋಪಿಸುತ್ತಿದ್ದಾರೆ.

ಈ ರಸ್ತೆ ಈ ಹಿಂದೆ ಕಚ್ಚಾ ರಸ್ತೆಯಾಗಿದ್ದು, ರಸ್ತೆಯನ್ನು ಸುಸಜ್ಜಿತಗೊಳ್ಳಬೇಕೆಂದು ಈ ಭಾಗದ ಕಾಲೋನಿಯವರು ಊರವರು ಮನವಿ ಮಾಡಿದ್ದರು.‌ ಗ್ರಾಮಸಭೆಗಳಲ್ಲಿಯೂ ಒತ್ತಾಯಿಸಿದ್ದರು. ಹೀಗಾಗಿ ಈ ಭಾಗದ ಜನಪ್ರತಿನಿಧಿಗಳು ಆದ್ಯತೆಯ ಮೇರೆಗೆ ಶ್ರಮಿಸಿ ಕಾಂಕ್ರೀಟ್ ಕರಣಕ್ಕೆ ಅನುದಾನ ತರಿಸಿದ್ದರು.

ಈ ರಸ್ತೆಯನ್ನು ನಿರ್ಮೀತಿ ಕೇಂದ್ರದವರು ನಿರ್ಮಿಸಿದ್ದು ಇದೀಗ ಉದ್ಘಾಟನೆ ಆಗುವ ಮೊದಲೇ ಬಿರುಕು ಬಿಟ್ಟಿದೆ. ಹೀಗಾಗಿ ಇದು ಕಳೆಪೆ ಕಾಮಗಾರಿಯಾಗಿದೆ ಎಂದು ಊರವರು ಆರೋಪಿಸುತ್ತಿದ್ದಾರೆ.

ನಿರ್ಮಿತಿ ಕೇಂದ್ರದವರು ಬೊಳ್ಳಾಜೆ ಶಾಲೆಯಲ್ಲಿ ನಿರ್ಮಿಸಿದ ರಂಗಮಂದಿರ ಪ್ರಯೋಜನಕ್ಕೆ ಬಾರದಂತೆ ಆಗಿದ್ದು ಇದೀಗ ಇದೇ ಪರಿಸರದ ರಸ್ತೆಯೂ ಕಳಪೆ ಕಾಮಗಾರಿಗೆ ಸಾಕ್ಷಿಯಾದಂತಾಗಿದೆ.

LEAVE A REPLY

Please enter your comment!
Please enter your name here