ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಒಡಂಬಡಿಕೆ ಕುರಿತು ದೂರದೃಷ್ಟಿ ಕಾರ್ಯಕ್ರಮ

0

ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಚೈಲ್ಡ್ ರೈಟ್ ಟ್ರಸ್ಟ್ ಸಂಸ್ಥೆಯ ವತಿಯಿಂದ ಸುಸ್ಥಿರ ಅಭಿವೃದ್ಧಿಯ ಗುರಿಗಳು ಮತ್ತು ವಿಶ್ವ ಮಕ್ಕಳ ಒಡಂಬಡಿಕೆಯ ಕುರಿತು ದೂರ ದೃಷ್ಟಿ ಕಾರ್ಯಕ್ರಮವನ್ನು CRT ಸಂಸ್ಥೆಯ ಸಂಯೋಜಕರಾದ ಕುಮಾರಿ ದಿವ್ಯಶ್ರೀ ಅವರು ಮೇ.29 ರಂದು ನಡೆಸಿಕೊಟ್ಟರು.


ಈ ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಆಶಾ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಶಿಕ್ಷಕರು ಭಾಗವಹಿಸಿದ್ದರು.