ದಿ.ನವೀನ್ ರೈ ಮೇನಾಲ – ದಿ.ಸುಧೀರ್ ರೈ‌ ಮೇನಾಲರ ಮನೆಗೆ ಸಂಸದ ನಳಿನ್ ಕಟೀಲ್ ಭೇಟಿ

0

ಮನೆಯವರಿಗೆ ಸಾಂತ್ವನ

ಮೇ.18 ರಂದು‌ ನಿಧನರಾದ ಬಿಜೆಪಿ ನಾಯಕ, ಮಾಜಿ ಜಿ.ಪಂ. ಸದಸ್ಯ ‌ನವೀನ್ ಕುಮಾರ್ ಮೇನಾಲರ ಮನೆಗೆ ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಭೇಟಿ‌ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಬೆಳಗ್ಗೆ ‌ಮೇನಾಲಕ್ಕೆ ಆಗಮಿಸಿದ ಅವರು ನವೀನ್ ರೈಯವರನೆಗೆ ತೆರಳಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪತ್ನಿ, ಮಕ್ಕಳು ಹಾಗೂ‌ ಮನೆಯವರಿಗೆ ಸಾಂತ್ವನ ನೀಡಿದರು.

ಬಳಿಕ 5 ತಿಂಗಳ ಹಿಂದೆ ನಿಧನರಾದ ಕಾಂಗ್ರೆಸ್ ಧುರೀಣ ಸುಧೀರ್ ರೈ ಮೇನಾಲರ‌ ಮನೆಗೆ ಭೇಟಿ ನೀಡಿದ ಸಂಸದರು ಅಲ್ಲಿ‌ ಸುಧೀರ್ ರ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮನೆಯವರಿಗೆ ಸಾಂತ್ವನ ‌ಹೇಳಿದರು.