ಅಡ್ಪಂಗಾಯ : ಕಾಂಗ್ರೆಸ್ ವಾರ್ಡ್ ಸಮಿತಿಯಿಂದ ಅಕ್ಕಿ ಕೊಡುಗೆ

0

ಅಜ್ಜಾವರ ಗ್ರಾಮದ ಅಡ್ಪoಗಾಯ ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ಮೇ.29ರಂದು ನಡೆದ ಮಾವಿನಪಳ್ಳ ಗೀತಾ ಅವರ ಮಗಳ ಮದುವೆಗೆ 50 ಕೆ.ಜಿ ಅಕ್ಕಿಯ ಹಣ ಹಾಗೂ ಜೂ.1 ರಂದು ಸಿ.ಕೆ.ಹಾಸೈನಾರ್ ಅವರ ಮಗಳ ಮದುವೆಗೆ 50 ಕೆಜಿ ಅಕ್ಕಿಯ ಜೊತೆಗೆ ಕಾಯಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಹಾಸೈನಾರ್ ಹಾಜಿ ಗೊರಡ್ಕ, ಬ್ಲಾಕ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷರಾದ ಖಾದರ್ ಬಯಂಬು,ಅಡ್ಪoಗಾಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಎ.ಬಿ, ರಾಜೇಶ್ ಮಾವಿನಪಳ್ಳ ಹಾಗೂ ಕಾರ್ಯದರ್ಶಿ. ಮುಹಮ್ಮದ್ ಕುಂಞ, ಸೇಲಿಂ ಅಡ್ಕ ವಿಶ್ವನಾಥ್ ಮಾವಿನಪಳ್ಳ ಉಪಸ್ಥಿತರಿದ್ದರು.