ಸುಬ್ರಹ್ಮಣ್ಯ: ಮ್ಯಾನ್ ಹೋಲ್ ಗೆ ಕಾಲು ಹಾಕಿ ಯಶಸ್ವಿನಿ ಆನೆ ಕಾಲಿಗೆ ಗಾಯ, ಚಿಕಿತ್ಸೆ, ಚೇತರಿಕೆ

0

ಒಳ ಚರಂಡಿಯ ಮ್ಯಾನ್ ಹೋಲ್ ಗೆ ಕಾಲು ಸಿಲುಕಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿನಿ ಕಾಲಿಗೆ ಗಾಯವಾದ ಘಟನೆ ವರದಿಯಾಗಿದೆ.

ಆದಿ ಸುಬ್ರಹ್ಮಣ್ಯ ಭಾಗದಲ್ಲಿ ನಡೆದುಕೊಂಡು ಹೋಗುತಿದ್ದಾಗ ಆನೆಯ ಮುಂದಿನ ಕಾಲು ಮ್ಯಾನ್ ಹೋಲ್ ಒಳಗೆ ಹೋಗಿ ಸಣ್ಣ ಪುಟ್ಟ ಗಾಯವಾದ ಘಟನೆ ನಡೆದಿದ್ದು ಗಾಯಕ್ಕೆ ಮೈಸೂರಿನಿಂದ ವೈದ್ಯರು ಬಂದು ಚಿಕಿತ್ಸೆ ನೀಡಲಾಗುತಿದ್ದು ಚೇತರಿಕೆ ಕಂಡು ಬಂದಿರುವುದಾಗಿ ತಿಳಿದು ಬಂದಿದೆ.