ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ.31 ರಂದು ನಿವೃತ್ತರಾಗಲಿರುವ ಎಇಇ ಹನುಮಂತರಾಯಪ್ಪರಿಗೆ ಬೀಳ್ಕೊಡುಗೆ ಸಮಾರಂಭ ಮೇ.30 ರಂದು ಸುಳ್ಯ ಕೇರ್ಪಳದಲ್ಲಿರುವ ಬಂಟರ ಭವನದಲ್ಲಿ ನಡೆಯಿತು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಸುಂದರಯ್ಯ ಅಧ್ಯಕ್ಷತೆ ವಹಿಸಿದ್ದರು.
















ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಕ್ಸ್ ಕ್ಯೂಟಿವ್ ಇಂಜಿನಿಯರ್ ವೇಣುಗೋಪಾಲ, ಉಪಕಾರ್ಯದರ್ಶಿ ಆನಂದ್ ಕುಮಾರ್, ಯೋಜನಾ ನಿರ್ದೇಶಕ ಜಯರಾಮ,
ಶಿರಾ ತಾಲೂಕಿನ
ನಿವೃತ್ತ ಖಜಾನಾಧಿಕಾರಿ ಜಯರಾಮಯ್ಯ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಸಿವಿಲ್ ವಿಭಾಗದ ಉಪನ್ಯಾಸಕ ಚಂದ್ರಶೇಖರ್,
ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ರಾಜೇಂದ್ರ, ಇಂಜಿನಿಯರ್ ಎಸ್. ಎಸ್. ಹುಕ್ಕೇರಿ ವೇದಿಕೆಯಲ್ಲಿ ಇದ್ದರು.

ಇಂಜಿನಿಯರ್ ಜನಾರ್ದನ, ಉಬರಡ್ಕ ಗ್ರಾ.ಪಂ. ಸದಸ್ಯ ಹರೀಶ್ ರೈ ಉಬರಡ್ಕ, ದೇವಚಳ್ಳ ಗ್ರಾ.ಪಂ ಸದಸ್ಯ ಶೈಲೇಶ್ ಅಂಬೆಕಲ್ಲು, ಉಬರಡ್ಕ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಇಂಜಿನಿಯರ್ ಮಣಿಕಂಠ, ಗುತ್ತಿಗೆದಾರರಾದ ಸುಭೋದ್ ಶೆಟ್ಟಿ ಮೇನಾಲ, ಕರುಣಾಕರ ರೈ, ಜಿ.ಪಂ. ಉದ್ಯೋಗಿ ನೇಮಿರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ನವನೀತ್ ರೈ ಪೇರಾಲುಗುತ್ತು ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ನಾರ್ಕೋಡು ವಂದಿಸಿದರು.









