ಭರದಿಂದ ಸಾಗುತ್ತಿರುವ ಸೋಣಂಗೇರಿ – ಬೇಂಗಮಲೆ ರಸ್ತೆ ಅಗಲೀಕರಣ

0

ರಸ್ತೆ ಅಗಲೀಕರಣಕ್ಕಿದ್ದ ಸಮಸ್ಯೆ ನಿವಾರಣೆ

ಸೋಣಂಗೇರಿ ಬೇಂಗಮಲೆ ರಸ್ತೆ ಅಭಿವೃದ್ಧಿ ಕೆಲಸ ಭರದಿಂದ ಸಾಗುತ್ತಿದ್ದು ರಸ್ತೆ ಅಗಲೀಕರಣಕ್ಕಿದ್ದ ಸಮಸ್ಯೆಗಳು ನಿವಾರಣೆಯಾಗಿದೆ.
ಸೋಣಂಗೇರಿಯಿಂದ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದ್ದು ರಸ್ತೆ ಬದಿಯಲ್ಲಿರುವ ಕೆಲವು ಮರಗಳನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದಾರೆ.


ಇತ್ತೀಚೆಗೆ ನೂತನ ಶಾಸಕಿ ಭಾಗೀರಥಿ ಮುರುಳ್ಯರವರ ಉಪಸ್ಥಿತಿಯಲ್ಲಿ ಪಿಡಬ್ಕ್ಯುಡಿ ಇಂಜಿನಿಯರ್ ಪರಮೇಶ್ವರ್ ಹಾಗೂ ಗುತ್ತಿಗೆದಾರರಾದ ಸತೀಶ್ ,ಎಸಿಎಫ್ ಕಾರ್ಯಪ್ಪ,ರೇಂಜರ್ ಕಿರಣ್ ,ಉಪವಲಯಾರಣ್ಯಾಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ರಸ್ತೆ ಬದಿ ಅಗಲೀಕರಣಕ್ಕೆ ಸಮಸ್ಯೆಯಾಗುತ್ತಿರುವ ಮರಗಳ ತೆರವು ಬಗ್ಗೆ ಸಮಾಲೋಚಿಸಿದ್ದರು.
ಬಳಿಕ ಕೆಲವು ಮರಗಳ ತೆರವು ಕಾರ್ಯ ನಡೆದು ರಸ್ತೆ ಅಗಲೀಕರಣ ನಡೆಯುತ್ತಿದೆ.


ಸಮಾಲೋಚನೆ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಜ್ ಕುಕ್ಕೇಟಿ, ಸಂತೋಷ್ ಜಾಕೆ ಮೊದಲಾದವರಿದ್ದರು.


ಸೋಂಣಂಗೇರಿಯಲ್ಲಿ ಈಗಾಗಲೇ ರಸ್ತೆ ಅಗಲೀಕರಣವಾಗಿ ಡಾಮರೀಕರಣ ನಡೆಯುತ್ತಿದ್ದು ಸೋಣಂಗೇರಿ ಜಂಕ್ಷನ್ ನಲ್ಲಿ ಸುಂದರವಾದ ಸರ್ಕಲ್ ನಿರ್ಮಾಣವಾಗಲಿದೆ ಎಂದು ಎಸ್.ಎನ್.ಮನ್ಮಥರವರು ತಿಳಿಸಿದ್ದಾರೆ.