ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಾಸ್ತರರಾದ ಕೆ.ಜತ್ತಪ್ಪರವರು ನಿವೃತ್ತಿ – ಸನ್ಮಾನ , ಬೀಳ್ಕೊಡುಗೆ

0

ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದವರು : ದಯಾಕರ ಆಳ್ವ

ಎಲ್ಲರೊಂದಿಗೆ ಬೆರೆತು ಸಂಘದ ಅಭಿವೃದ್ಧಿಗೆ ದುಡಿದವರು : ಶ್ರೀರಾಮ ಪಾಟಾಜೆ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಾಸ್ತರಾಗಿದ್ದ ಕೆ.ಜತ್ತಪ್ಪರವರು ಮೇ.31 ರಂದು ಸೇವಾ ನಿವೃತ್ತಿಗೊಂಡಿದ್ದು ಅವರಿಗೆ ಸಂಘದ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುವ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ನಡೆಯಿತು.


ಸಂಘದ ಮಾಜಿ ಅಧ್ಯಕ್ಷ ದಯಾಕರ ಆಳ್ವರವರು ಸಂಘದ ವತಿಯಿಂದ ಕೆ.ಜತ್ತಪ್ಪ ಮತ್ತು ಶ್ರೀಮತಿ ಲಲಿತಾ ದಂಪತಿಯನ್ನು ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭ ಹಾರೈಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಬ್ದುಲ್ ರಹಮಾನ್ ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ಳಾರೆ ಶಾಖೆಯ ಮೆನೇಜರ್ ಸಂತೋಷ್, ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ನಿರ್ದೇಶಕರಾದ ಕರುಣಾಕರ ಆಳ್ವ, ರಮೇಶ ಮಾರ್ಲ, ವಿಠಲದಾಸ್ ಎನ್.ಎಸ್.ಡಿ,,ಶ್ರೀಮತಿ ನಿರ್ಮಲ ರೈ,ಶ್ರೀಮತಿ ಸಾವಿತ್ರಿ,ಹರೀಶ ಬಿ, ಲಕ್ಷ್ಮಣ ಬಿ.ಜಿ,ಸುಂದರ ಕೆ.ಜೆ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಆಳ್ವ, ಸಂಘದ ನಿವೃತ್ತ ಅಕೌಂಟೆಂಟ್ ದಿವಾಕರ ರೈ, ಚೇತನ್ ಪಡ್ಪು,ಕು‌.ಚೈತನ್ಯ ಪಡ್ಪು ಹಾಗೂ ಸಂಘದ ಸಿಬ್ಬಂದಿ ವರ್ಗದವರಾದ ಗಣೇಶ ಎ,ಚಂದ್ರಶೇಖರ ಗೌಡ,ಶಿವಪ್ರಸಾದ್ ಬೋರ್ಕರ್,ಲಿಂಗಪ್ಪ ಪೂಜಾರಿ,ವೇದಿತ್,ಆಶಿತ್,ಭರತ್ ,ಪಿಗ್ಮಿ ಸಂಗ್ರಾಹಕ ವಸಂತ ಬೋರ್ಕರ್ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ರವೀಂದ್ರನಾಥ ಶೆಟ್ಟಿ ಸ್ವಾಗತಿಸಿ, ಹಿರಿಯ ಗುಮಾಸ್ತೆ ಶ್ರೀಮತಿ ಸುನಂದ ರೈ ಸನ್ಮಾನ ಪತ್ರ ವಾಚಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ ಕಾರ್ಯಕ್ರಮ ನಿರೂಪಿಸಿ,ಶ್ರೀಮತಿ ಗುಲಾಬಿ ವಂದಿಸಿದರು.