ಕೋಲ್ಚಾರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಜ್ಞರಿಂದ ಪ್ರಶ್ನಾ ಚಿಂತನೆ-ದೈವಂಕಟ್ಟು ಮಹೋತ್ಸವದ ಲೆಕ್ಕ ಪತ್ರ ಮಂಡನೆ

0

ಕೋಲ್ಚಾರು ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ದೈವಂಕಟ್ಟು ಮಹೋತ್ಸವದ ಕುರಿತು ದೈವಜ್ಞರಿಂದ ಪ್ರಶ್ನಾ ಚಿಂತನೆಯು ಮೇ.31 ರಂದು ದೈವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಕೇರಳದ ಜ್ಯೋತಿಷ್ಯರಾದ ಬೀಮಕಲ್ ರತ್ನಾಕರ ರವರು ಪ್ರಶ್ನಾ ಚಿಂತನೆ ಇರಿಸಿದರು.
ಮೇ.16,17 ಮತ್ತು 18 ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ನಡೆದಿದ್ದು ಉತ್ಸವದ ಸಾಧಕ ಬಾಧಕಗಳ ಕುರಿತು ಚಿಂತನೆ ನಡೆಸಲಾಯಿತು.

ಬಳಿಕ ಮಹೋತ್ಸವದ ಲೆಕ್ಕಪತ್ರ ಮಂಡನಾ ಸಭೆಯು ಮಹೋತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು ಉತ್ಸವದ ಅಯ ವ್ಯಯದ ಲೆಕ್ಕಪತ್ರ ಮಂಡಿಸಿದರು. ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಿಕಣ್ಣ ಬೇಡಗ ಮಹೋತ್ಸವದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಕ್ಷೇತ್ರದ ಸ್ಥಾನಿಕರಾದ ಸತ್ಯನ್ ಕಾರ್ನವರ್,ಶ್ರೀಧರ ಕುತ್ತಿಕೋಲು,
ಸಂಚಾಲಕ ಸೋಮಶೇಖರ ಕೊಯಿಂಗಾಜೆ, ಕಣಕ್ಕೂರು ಕೊರಗಪ್ಪ ಮಾಸ್ತರ್ ಉತ್ಸವದ ಕುರಿತು
ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು ಮಹೋತ್ಸವ ಕ್ಕೆ ಸಹಕರಿಸಿದ ಎಲ್ಲಾ ಸಂಘಟನೆಗಳನ್ನು ಮತ್ತು ಸ್ವಯಂ ಸೇವಕರನ್ನು ಅಭಿನಂದಿಸಿದರು. ಕುತ್ತಿಕೋಲು ಕ್ಷೇತ್ರದ ಅಧ್ಯಕ್ಷ ಕುಂಞಿಕಣ್ಣ ಬೇಡಗ, ದೈವ ನರ್ತಕರಾದ ಕವೆನಾಡ ಜನಾರ್ದನ, ಸುಕುಮಾರನ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೋಲ್ಚಾರು ಕುಟುಂಬದ ಹಿರಿಯರಾದ ರಾಮಪ್ಪ ಮಾಸ್ತರ್ ಕೋಲ್ಚಾರು, ದೈವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಗೌಡ ಕೋಲ್ಚಾರು, ಮಹೋತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು, ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ,
ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಕಣ್ಣ ಬೇಡಗ, ಸಂಚಾಲಕರಾದ ಸೋಮಶೇಖರ ಕೊಯಿಂಗಾಜೆ, ಜಯಪ್ರಕಾಶ್ ಕುಂಚಡ್ಕ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು, ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು, ಶಿವಪ್ರಸಾದ್ ಕೋಲ್ಚಾರು, ಆಲೆಟ್ಟಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ,ಸ್ಥಾನದ ಮನೆಯ ಅರ್ಚಕ ದಾಮೋದರ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು, ಕಾರ್ಯದರ್ಶಿ ಶ್ರೀಮತಿ ನಾಗವೇಣಿ ಕೋಲ್ಚಾರು, ಕೋಶಾಧಿಕಾರಿ ಗೋವರ್ಧಿನಿ ಕೋಲ್ಚಾರು,ಪದಾಧಿಕಾರಿಗಳು ಮತ್ತು ಸದಸ್ಯರು,

ಕೋಲ್ಚಾರು
ಕುಟುಂಬಸ್ಥರು,
ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು, ಉಪಾಧ್ಯಕ್ಷ ಪವಿತ್ರನ್ ಗುಬ್ಬಿ,
ತೀಯ ಸಮಾಜ ಬಾಂಧವರು,ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು
ಮತ್ತು ಸದಸ್ಯರು ಹಾಗೂ ಗ್ರಾಮದ ತರವಾಡು ಮನೆತನದವರು,ಉಪ ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ಮಹೋತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸಹಕರಿಸಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.