ಅಮರಪಡ್ನೂರು : ಅಜ್ಜನಗದ್ದೆ ಸರಕಾರಿ ಶಾಲೆಯಲ್ಲಿ ಅದ್ದೂರಿಯ ಪ್ರಾರಂಭೋತ್ಸವ

0

ಅಮರಪಡ್ನೂರು
ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಅಜ್ಜನಗದ್ದೆ ) ಪ್ರಾರಂಭೋತ್ಸವು ಮೇ. 31ರಂದು ಅದ್ದೂರಿಯಾಗಿ ಪೂರ್ಣಕುಂಭ ಸ್ವಾಗತ ದೊಂದಿಗೆ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಅತಿಥಿಗಳಾಗಿ ಅಮರ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಭುವನೇಶ್ವರಿ ಯವರು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಹಾಗೂ ಶಾಲಾ ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಪೋಷಕರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.