ಪೆರುವಾಜೆ ಸ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

0

ಎಸ್.ಡಿ.ಎಂ.ಸಿ‌.ಅಧ್ಯಕ್ಷರಿಗೆ ಸನ್ಮಾನ,ಬೀಳ್ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು.
ಆರು ವರ್ಷಗಳಿಂದ ಎಸ್ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉದಯಗಣೇಶ ಅರ್ನಾಡಿಯವರನ್ನು ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳು ಶಾಲೆಯ ಅಭಿವೃದ್ಧಿ ಗೆ ಶ್ರಮಿಸಿದ್ದುದ್ದನ್ನು ಸ್ಮರಿಸಿ ಕೊಂಡಾಡಿದರು .


ಸಭೆಯಲ್ಲಿ ಊರಿನ ಹಿರಿಯರು ಹಾಗೂ ದಾನಿಗಳಾದ ಶ್ರೀಮತಿ ಸೀತಾ ಕೇಶವ ಭಟ್, ಪೆರುವಾಜೆ ಗ್ರಾ. ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ವಾರ್ಡ ಸದಸ್ಯ ಪದ್ಮನಾಭ ಶೆಟ್ಟಿ, ಕೆ.ಪಿ.ಎಸ್ ಬೆಳ್ಳಾರೆ ಹೈಸ್ಕೂಲು ವಿಭಾಗದ ಅಧ್ಯಾಪಕರಾದ ರಾಮಚಂದ್ರ ಭಟ್, ಎಸ್.ಡಿ.ಎಂಸಿ ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಉಮೇಶ್, ಪೆರುವಾಜೆ ಪಿ.ಡಿ.ಒ ಜಯಪ್ರಕಾಶ್ ಅಲೆಕ್ಕಾಡಿ, ನಿವೃತ್ತ ಮುಖ್ಯಶಿಕ್ಷಕರಾದ ಶ್ರೀಮತಿ ಸುಭದ್ರ ಪೆರುವಾಜೆ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಸುನಿಲ್ ರೈ, ಆರೋಗ್ಯ ಅಧಿಕಾರಿ ಕುಮಾರಿ ರಚನಾ, ಆಶಾ ಕಾರ್ಯಕರ್ತೆ ಶ್ರೀಮತಿ ರಾಗಿಣಿ, ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್, ಉಪಸ್ಥಿತರಿದ್ದರು.


ಶಿಕ್ಷಕಿಯರಾದ ಶ್ರೀಮತಿ ಲಲಿತಕುಮಾರಿ, ಶ್ರೀಮತಿ ರತ್ನಾವತಿ ಬಿ, ಶ್ರೀಮತಿ ಶೃತಿ, ಶ್ರೀಮತಿ ರೇವತಿ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಅಡುಗೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.