ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ನೌಕರೆ ಹಾಲವ್ವರಿಗೆ ಬೀಳ್ಕೊಡುಗೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿ ಮೇ.31 ರಂದು ನಿವೃತ್ತರಾದ ನೌಕರೆ ಹಾಲವ್ವರಿಗೆ ದೇವಸ್ಥಾನದಲ್ಲಿ ಬೀಳ್ಕೊಡುಗೆ ಮಾಡಲಾಯಿತು.

ಶ್ರೀ ದೇವಳದ ನೌಕರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ
ಹಾಲವ್ವ ಅವರನ್ನು ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು, ಸುಧಾಕರ ಎಸ್.ಕೆ, ರಾಜಲಕ್ಷ್ಮಿ ಶೆಟ್ಟಿಗಾರ್, ಪುರುಷೋತ್ತಮ್ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ದೇವಳದ ಸಿಬ್ಬಂಧಿ ಯೋಗೀಶ್ ಸ್ವಾಗತಿಸಿದರು, ಸುಜಾತಾ ಮತ್ತು ಅರ್ಪಿತಾ ಪ್ರಾರ್ಥನೆ ಹಾಡಿದರು, ಮಹೇಶ್ ಕುಮಾರ್ ಎಸ್ ಪರಿಚಯಿಸಿದರು, ರಾಜಲಕ್ಷ್ಮಿ ಶೆಟ್ಟಿಗಾರ್ ವಂದಿಸಿದರು.


ಹಾಲವ್ವ ಅವರು ಪ್ರಸ್ತುತ ಜಮಾ ಉಗ್ರಾಣ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ೧೯೯೨ರಿಂದ ಸೇವೆ ಆರಂಭಿಸಿದ ಇವರು ೨೦೦೭ರಲ್ಲಿ ಖಾಯಂಮಾತಿಗೊಂಡಿದ್ದರು. ತಮ್ಮ ಸೇವಾವಧಿಯಲ್ಲಿ ಇವರು ಜಮಾ ಉಗ್ರಾಣ ಸೇರಿದಂತೆ, ಭೋಜನಶಾಲೆ, ವಸತಿಗೃಹಗಳು, ಶ್ರೀ ದೇವಳದ ಕೃಷಿ ತೋಟದಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು.