ಹಾಲೆಮಜಲು: ಇನ್ನೂ ದುರಸ್ತಿಯಾಗದ ಶೌಚಾಲಯ

0

ಹಾಲೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ದುರಸ್ತಿಗಾಗಿ ಕೆಲವು ದಿನಗಳ ಹಿಂದೆ ಶೌಚಾಲಯದ ಚಾವಣಿಯನ್ನು ತೆಗೆದು ಹಾಕಲಾಗಿದ್ದು, ಇನ್ನು ದುರಸ್ತಿ ಆಗಿರುವುದಿಲ್ಲ. ಇದರಿಂದಾಗಿ ಶಾಲೆ ಪ್ರಾರಂಭವಾದರೂ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲವಾಗಿದ್ದು, ಇದರಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕೂಡಲೇ ದುಡಿಸ್ತಿಪಡಿಸಬೇಕೆಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
( ವರದಿ: ಡಿ.ಹೆಚ್.)