ಗಾಯಗೊಂಡ ನಾಯಿಯ ನೋವಿಗೆ ಮರುಗಿದ ಮತ್ತೊಂದು ನಾಯಿ !

0

ಬಾಳಿಲದಲ್ಲಿ ನಾಯಿಯ ಅಂತಃಕರಣದ ಅನಾವರಣ

ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ನಾಯಿಯ ಬಳಿ ಮತ್ತೊಂದು ನಾಯಿ ಬಂದು ಅಲ್ಲೇ ಮೊಕ್ಕಾಂ ಹೂಡಿದ ಘಟನೆಯೊಂದಕ್ಕೆ ಬಾಳಿಲ ಸಾಕ್ಷಿಯಾಯಿತು.

ಬಾಳಿಲ ಗ್ರಾ.ಪಂ ಬಳಿ ಇಂದು ಬೆಳಿಗ್ಗೆ ರಸ್ತೆಯಲ್ಲಿ ವಾಹನವೊಂದು ಗುದ್ದಿದ ಪರಿಣಾಮ ನಾಯಿಯ ಸೊಂಟಕ್ಕೆ ಬಲವಾದ ಏಟು ಬಿದ್ದು ರಸ್ತೆ ಬದಿಯ ಚರಂಡಿಯಲ್ಲಿ ಒದ್ದಾಡುತಿತ್ತು. ಇದನ್ನು ಕಂಡ ಮತ್ತೊಂದು ನಾಯಿ ಆ ನಾಯಿ ಬಳಿ ಕೂತು ಅದನ್ನೇ ನೋಡುತ್ತಾ ಕಾದು ಕುಳಿತಿತ್ತು.