ಮುರುಳ್ಯ ಶಾಲಾ ಪ್ರಾರಂಭೋತ್ಸವ

0

ಸ ಉ.ಹಿ.ಪ್ರಾ.ಶಾಲೆ ಮುರುಳ್ಯ ಶಾಲಾ ಪ್ರಾರಂಭೋತ್ಸವವು ಮಕ್ಕಳು, ಪೋಷಕರು, ಊರವರು, ದಾನಿಗಳು ಶಿಕ್ಷಕರು ಸೇರಿ ಜಾಥಾ ಹೋಗುವ ಮೂಲಕ ಪ್ರಾರಂಭಗೊಂಡಿತು.

ಸುಳ್ಯ ತಾಲೂಕಿನ ಶಾಸಕರಾದ ಕು. ಭಾಗೀರಥಿ ಮುರುಳ್ಯ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ವನ್ನು ಉದ್ಧಾಟಿಸಿದರು. ಹಾಗೆಯೇ ಶಾಲಾಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕವನ್ನು ವಿತರಿಸಲಾಯಿತು. ಶಾಲಾವತಿಯಿಂದ ನಮ್ಮ ಶಾಲಾ ಹಿರಿಯ ವಿದ್ಯಾರ್ಥಿಯಾದ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ಮುಖ್ಯ ಗುರುಗಳಾದ ಶಶಿಕಲಾರವರು ಪೋಷಕರಿಗೆ ಈ ವರ್ಷದ ಸಂಪೂರ್ಣ ಶೈಕ್ಷಣಿಕ ಮಾಹಿತಿಯನ್ನು ನೀಡಿದರು.

ಮಕ್ಕಳ ಸುರಕ್ಷಾ ಸಮಿತಿ ಮತ್ತು ತೆರವಾದ ಎಸ್. ಡಿ. ಎಂ.ಸಿ.ಸ್ಥಾನಕ್ಕೆ ಸದಸ್ಯರನ್ನು ಆಯ್ಕೆಮಾಡಲಾಯಿತು. ಕಾರ್ಯಕ್ರಮದಲ್ಲಿ. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕು, ಜಾನಕಿ, ಉಪಾಧ್ಯಕ್ಷರಾದ ವನಿತಾ ಸುವರ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಅಶೋಕ ರೈಊರು ಸಾಗು, ನಿವೃತ್ತ ತಹಶೀಲ್ದಾರ್ ಜನಾರ್ದನ ಅಲೆಕ್ಕಾಡಿ, ಎಸ್. ಡಿ. ಎಂ ಸಿ ಅಧ್ಯಕ್ಷರಾದ ಶ್ರೀಮತಿ ಮಧು, ಪಿ.ಆರ್, ಉಪಾಧ್ಯಕ್ಷರಾದ ಅವಿನಾಶ್ ದೇವರ ಮಜಲು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ದಾನಿಗಳು, ಪಂಚಾಯತ್ ಪ್ರತಿನಿಧಿಗಳು, ಊರವರು, ಪೋಷಕರು, ಮಕ್ಕಳು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನೂಜಾಡಿ ಎಲ್ಲರಿಗೂ ಸಿಹಿತಿಂಡಿಯನ್ನು ಒದಗಿಸಿದ್ದರು. ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಮಧು ಪಿ.ಆರ್ ರವರು ಎಲ್ಲರಿಗೂ ಪಾಯಸವನ್ನು ಒದಗಿಸಿದರು. ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಭವಾನಿ ವಂದಿಸಿದರು. ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮಮತಾ, ರಶ್ಮಿ,ವಾಣಿ ಶ್ರೀ ಸಹಕರಿಸಿದರು.