ಕಳಂಜ ಸುಬ್ರಹ್ಮಣ್ಯ ಭಟ್ ರವರ ಹೃದಯ ಶಸ್ತ್ರ ಚಿಕಿತ್ಸೆಗೆ ಕ್ಯಾಂಪ್ಕೋದಿಂದ ಧನಸಹಾಯ

0

ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯ ದತ್ತ ಎಂಬ ಧ್ಯೇಯ ವಾಕ್ಯದಡಿ ನಿಂತಿಕಲ್ಲು ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಭಟ್ ಕಳಂಜ ಅವರ ಹೃದಯ ಶಸ್ತ್ರ ಚಿಕಿತ್ಸೆ ಆಂಜಿಯೋಪ್ಲ್ಯಾಸ್ಟಿ ಸಲುವಾಗಿ ನೆರವಿನ ಹಸ್ತ ರೂ 50000/-(ಐವತ್ತು ಸಾವಿರ ರೂಪಾಯಿ ) ಚೆಕ್ ನ್ನು ಕ್ಯಾಂಪ್ಕೋ ನಿರ್ದೇಶಕ ರಾದ ಕೃಷ್ಣಪ್ರಸಾದ ಮಡ್ತಿಲ ಹಸ್ತಾಂತರಿಸಿದರು. ಕ್ಯಾಂಪ್ಕೋ ಮುಖ್ಯ ಪ್ರಭಂದಕರಾದ ಜಯರಾಮ ಶೆಟ್ಟಿ ಎ, ಶಾಖಾ ವ್ಯವಸ್ಥಾಪಕರಾದ ರಮೇಶ್ ಡಿ , ಸಿಬ್ಬಂದಿಗಳಾದ ಮಂಜುನಾಥ್ ನಾಯಕ್ ಹಾಗೂ ಜಯಂತಿ ಉಪಸ್ಥಿತರಿದ್ದರು.