ಆಲೆಟ್ಟಿ ರಸ್ತೆಯ ಮಿತ್ತಡ್ಕ ತಿರುವಿನಲ್ಲಿ ಒಮ್ನಿ ಕಾರು- ಬೈಕಿನ ಮಧ್ಯೆ ಅಪಘಾತ

0

ಶಿಕ್ಷಕ, ನಿವೃತ್ತ ಶಿಕ್ಷಕ ಸಹಿತ ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಆಲೆಟ್ಟಿ ಮುಖ್ಯ ರಸ್ತೆಯ ಮಿತ್ತಡ್ಕ ಇಳಿಜಾರಿನ ತಿರುವಿನಲ್ಲಿ ಒಮ್ನಿ ಕಾರು ಮತ್ತು ಪಲ್ಸರ್ ಬೈಕಿನ ಮಧ್ಯೆ ಅಪಘಾತ ಸಂಭವಿಸಿದ್ದು ಸವಾರರು ಗಾಯಗೊಂಡಿದ್ದಾರೆ.

ಸುಳ್ಯ ಕಡೆಯಿಂದ ಆಲೆಟ್ಟಿ ಕಡೆಗೆ ನಿವೃತ್ತ ಶಿಕ್ಷಕ ಶೇಷಪ್ಪ ಮಾಸ್ತರ್ ಮತ್ತು ಅವರ ಪತ್ನಿ ತಮ್ಮ ಒಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಕಾರಿನ ಮುಂಭಾಗಕ್ಕೆ ಆಲೆಟ್ಟಿ ಕಡೆಯಿಂದ ಸುಳ್ಯ ಕ್ಕೆ ಬರುತ್ತಿದ್ದ ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಸುನಿಲ್ ರವರು ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.

ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸುನಿಲ್ ರವರ ಕೈ ಮತ್ತು ಕಾಲಿಗೆ ಗಾಯವಾಗಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಕಾರಿನಲ್ಲಿ ದಂಪತಿ ಮಾತ್ರ ಪ್ರಯಾಣಿಸುತ್ತಿದ್ದು ಬೈಕ್ ಹೊಡೆದ ರಭಸಕ್ಕೆ ಅವರಿಬ್ಬರೂ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನನ್ನು ಮತ್ತು ಕಾರಿನಲ್ಲಿದ್ದ ದಂಪತಿಯನ್ನು ಸ್ಥಳೀಯರಾದ ಗುಡ್ಡೆಮನೆ ಕೃಷ್ಣಪ್ಪ ಗೌಡ ರವರು ತಮ್ಮ ಜೀಪಿನಲ್ಲಿ ಕರೆದು ಕೊಂಡು ಬಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.