ಅಪಘಾತ ಸಂಭವಿಸಿ ಏಳು ಗಂಟೆ ಕಳೆದರೂ ತೆರವುಗೊಳ್ಳದ ವಾಹನ

0

ಇಲಾಖಾ ನಿರ್ಲಕ್ಷ್ಯದ ಕುರಿತು ಸಾರ್ವಜನಿಕರ ಆಕ್ರೋಶ

ಸುಳ್ಯದ ಆಲೆಟ್ಟಿ ರಸ್ತೆಯಲ್ಲಿ ಮಧ್ಯಾಹ್ನ 11.30 ರ ವೇಳೆಗೆ ಕಾರು ಮತ್ತು ಬೈಕ್ ನಡುವೆ
ಅಫಘಾತ ಸಂಭವಿಸಿ ಗಂಟೆ 7 ಕಳೆದರೂ ವಾಹನಗಳ ತೆರವು ಮಾಡದೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ವಾಹನಗಳೆರಡು ರಸ್ತೆಯ ಮಧ್ಯಭಾಗದಲ್ಲಿರುವುದರಿಂದ ರಾತ್ರಿ ಸಮಯದಲ್ಲಿ ವಾಹನಗಳ ಸಂಚಾರ ಜಾಸ್ತಿಯಾಗಿರುವುದರಿಂದ ಮತ್ತೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಪೋಲಿಸ್ ಇಲಾಖೆ ಶೀಘ್ರ ಈ ವಾಹನಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.