ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಯಲ್ಲಿ ಶಾಲಾ ಪ್ರಾರಂಭೋತ್ಸವ

0

ಮಕ್ಕಳಿಗೆ ಭವ್ಯ ಸ್ವಾಗತ, ಅಕ್ಷತೆ ಹಾಕಿ ಆಶೀರ್ವದಿಸಿದ ಪೋಷಕರು

ಎಸ್.ಎಸ್.ಎಲ್.ಸಿ. ಸಾಧಕರಿಗೆ ಅಭಿನಂದನೆ

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಈ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಇಂದು ನಡೆಯಿತು.

ಇಂದು ಬೆಳಿಗ್ಗೆ ಗಣಹವನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮಕ್ಕಳ ಸ್ವಾಗತ ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಆಡಳಿತ ಮಂಡಳಿಯವರು ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು‌.ಬಳಿಕ ವಿದ್ಯಾರ್ಥಿಗಳು ಶ್ಲೋಕ ಪಠನ ಮಾಡಿದರು. ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ
ಪ್ರೀ ಕೆಜಿಯಿಂದ ಹತ್ತನೆ ತರಗತಿ ವರೆಗಿನ ಮಕ್ಕಳನ್ನು ಪುಷ್ಪಾರ್ಚನೆ, ಬ್ಯಾಂಡ್ ಸೆಟ್ ನೊಂದಿಗೆ ಸಭಾಭವನಕ್ಕೆ ಸ್ವಾಗತಿಸಲಾಯಿತು. .ಬಳಿಕ ವಿದ್ಯಾರ್ಥಿಗಳು ಆರತಿ ಬೆಳಗಿ ಸ್ವಾಗತಿಸಿದರು. ತರಗತಿವಾರು ಆಗಮಿಸಿದ ವಿದ್ಯಾರ್ಥಿಗಳು ಪೋಷಕರ ಎದುರು ಕಾಲು ಹಿಡಿದು ಆಶೀರ್ವಾದ ಪಡೆದರು.ಪೋಷಕರು ಆರತಕ್ಷತೆ ಹಾಕಿ ತಮ್ಮ ಮಕ್ಕಳನ್ನು ಹರಸಿದರು. ಆಡಳಿತ ಮಂಡಳಿಯವರ ಆಶೀರ್ವಾದವನ್ನೂ ಪಡೆದುಕೊಂಡರು.

ಬಳಿಕ ನಡೆದ ಪೋಷಕರ ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಭಟ್ ತಳೂರು ವಹಿಸಿದ್ದರು. ಶಾಲಾ ಸಂಚಾಲಕ ಎ.ವಿ.ತೀರ್ಥರಾಮ, ನಿರ್ದೇಶಕರಾದ ರಾಧಾಕೃಷ್ಣ ಮಾವಿನಕಟ್ಟೆ ,ಮಹಾವೀರ ಜೈನ್, ಕೃಷ್ಣಯ್ಯ ಮೂಲೆತೋಟ,ಶ್ರೀಕೃಷ್ಣ ಭಟ್ ಗುಂಡಿಹಿತ್ಲು,ಮುಖ್ಯ ಶಿಕ್ಷಕ ಗಧಾದರ ಬಾಳುಗೋಡು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಯಲ್ಲಿ ಶೇ100 ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮಧ್ಯಾಹ್ನ ಕೃಷ್ಣಯ್ಯ ಮೂಲೆತೋಟರವರ ವತಿಯಿಂದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.