ನೂತನ ಸಹಕಾರಿ ಸಚಿವಕೆ ಎನ್. ರಾಜಣ್ಣರಿಗೆ ಸವಣೂರು ಸೀತಾರಾಮ ರೈಯವರಿಂದ ಅಭಿನಂದನೆ

0


ಕರ್ನಾಟಕ ರಾಜ್ಯದ ನೂತನ ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣರವರನ್ನು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಕೆ ಸೀತಾರಾಮ ರೈ ಸವಣೂರುರವರು ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದರು.
ಸಂಘದ ನಿರ್ದೇಶಕರಾದ ಎಸ್ ಎಂ ಬಾಪೂ ಸಾಹೇಬ್ ಮತ್ತು ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ನಾಗೇಶ್ ಬಾಬು ಜೊತೆಗಿದ್ದರು.