ಜೂ.05 : ಪೆರುವಾಜೆ ದೇವಸ್ಥಾನದಲ್ಲಿ ರಥ ನಿರ್ಮಾಣಕ್ಕೆ ಕಾಷ್ಟ ಶಿಲ್ಪಿಗೆ ವೀಳ್ಯ ಮುಹೂರ್ತ

0

ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ ನಿರ್ಮಾಣವಾಗಲಿದ್ದು ರಥ ನಿರ್ಮಾಣಕ್ಕೆ ಕಾಷ್ಟ ಶಿಲ್ಪಿಗೆ ವೀಳ್ಯ ಮುಹೂರ್ತವು ಜೂ.05 ರಂದು ನಡೆಯಲಿದೆ.
ರಥ ನಿರ್ಮಾಣದ ಬಗ್ಗೆ ದೇವಸ್ಥಾನದಲ್ಲಿ ಊರ ಭಕ್ತಾದಿಗಳ ಪೂರ್ವಭಾವಿ ಸಭೆಯು ಇತ್ತೀಚೆಗೆ ನಡೆದಿತ್ತು.
ಮಾ.23 ರಂದು ಬೆಳ್ಳಾರೆಯ ಪನ್ನೆಯಲ್ಲಿ ರಥ ನಿರ್ಮಾಣಕ್ಕೆ ದಾನವಾಗಿ ನೀಡಿದ ಮರಕ್ಕೆ ವೃಕ್ಷ ಪೂಜೆ ನಡೆದಿತ್ತು.
ವೀಳ್ಯ ಮುಹೂರ್ತದ ಬಳಿಕ ನೂತನ ರಥ ನಿರ್ಮಾಣದ ಕೆಲಸ ಪ್ರಾರಂಭವಾಗಲಿದೆ.
ವೀಳ್ಯ ಮುಹೂರ್ತದ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.