ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಚಾಪೆ ಕೊಡುಗೆ

0


ಐವರ್ನಾಡು ಗ್ರಾಮದ ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ 2021- 2022 ನೇ ಸಾಲಿನ ಪುಟಾಣಿ ಹನಿತ್ ವಿ.ಕೆ. ಖಂಡಿಗೆಮೂಲೆಯವರು ಚಾಪೆ ಕೊಡುಗೆಯಾಗಿ ನೀಡಿದ್ದಾರೆ.


ಇವರು ವೆಂಕಟರಮಣ ಖಂಡಿಗೆಮೂಲೆ ಶ್ರೀಮತಿ ಕುಸುಮಾವತಿ ವೆಂಕಟರಮಣ ಖಂಡಿಗೆಮೂಲೆ ದಂಪತಿಗಳ ಪುತ್ರ.


ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮಡ್ತಿಲ, ಸಹಾಯಕಿ ಬಾಂಜಿಕೋಡಿ ಪುಟಾಣಿಯ ತಾಯಿ ಶ್ರೀಮತಿ ಕುಸುಮಾವತಿ ವೆಂಕಟರಮಣ ಖಂಡಿಗೆಮೂಲೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಉಪಸ್ಥಿತರಿದ್ದರು.