ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವದ ಪೂರ್ವ ಭಾವಿ ಸಭೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಜೂ.5ರಂದು ನಡೆಯಲಿದ್ದು ಪೂರ್ವ ಭಾವಿ ಸಭೆಯು ಜೂ.3 ರಂದು ದೇವಸ್ಥಾನದ ಕಚೇರಿಯಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ,
ಶ್ರೀಪತಿ ಬೈಪಡಿತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷಎನ್.ಎ.ರಾಮಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಮಾಜಿ ಅಧ್ಯಕ್ಷರಾದ ಪ್ರಸನ್ನ ಕೆ.ಸಿ ಬಡ್ಡಡ್ಕ, ರತ್ನಾಕರ ಗೌಡ ಕುಡೆಕಲ್ಲು, ವ್ಯ.ಸ.ಸದಸ್ಯರಾದ ಜಗದೀಶ್ ಸರಳಿಕುಂಜ, ಅಚ್ಚುತ ಮಣಿಯಾಣಿ ಆಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ, ಶ್ರೀಮತಿ ಮಮತ ನಾರ್ಕೋಡು, ನಳಿನಿ ರೈ ಆಲೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ,
ಭಜನಾ ಸಂಘದ ಸದಸ್ಯ ಲಕ್ಷ್ಮಣ ಗೌಡ ಪರಿವಾರ,ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು. ವಾರ್ಷಿಕ ಮಹೋತ್ಸವದ ದಿನದಂದು ವಿಶೇಷವಾಗಿ ಏಕದಶಾರುದ್ರಾಭಿಷೇಕವಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ.
ಈ ಸಂದರ್ಭದಲ್ಲಿ ಧಾರ್ಮಿಕ ಸಭೆ ಮತ್ತು ಅರ್ಚಕ ಸುಬ್ರಾಯ ಭಟ್ ರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವು ನಡೆಯಲಿರುವುದು. ಉಳ್ಳಾಕುಲು ಚಾವಡಿ ನಿರ್ಮಾಣ ಕಾರ್ಯದ ಪೂರ್ವ ಸಿದ್ಧತೆಯ ಕುರಿತು ಚರ್ಚಿಸಲಾಯಿತು.