ಪೆರುವಾಜೆ ದೇವಸ್ಥಾನದಲ್ಲಿ ರಥ ನಿರ್ಮಾಣಕ್ಕೆ ಕಾಷ್ಟ ಶಿಲ್ಪಿಗೆ ವೀಳ್ಯ ಮುಹೂರ್ತ

0

ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ, ಕಾಷ್ಟ ಶಿಲ್ಪಿಗೆ ವೀಳ್ಯ ಹಸ್ತಾಂತರ

ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ ನಿರ್ಮಾಣವಾಗಲಿದ್ದು ರಥ ನಿರ್ಮಾಣಕ್ಕೆ ಕಾಷ್ಟ ಶಿಲ್ಪಿಗೆ ವೀಳ್ಯ ಮುಹೂರ್ತವು ಜೂ.05 ರಂದು ನಡೆಯಿತು.


ಕೆಮ್ಮಿಂಜೆ ಶ್ರೀ ಕಾರ್ತಿಕ್ ತಂತ್ರಿಗಳು ಪೂಜಾ ಕಾರ್ಯ ನೆರವೇರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿಯವರು ಶಿಲ್ಪಿಗಳಾದ ಹರೀಶ್ ಆಚಾರ್ಯ ಬೋಳ್ಯಾರು ಮತ್ತು ಸಂತೋಷ್ ಆಚಾರ್ಯರವರಿಗೆ ನೂತನ ರಥ ನಿರ್ಮಾಣ ಮಾಡಲು ವೀಳ್ಯ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕುಮಾರಮಂಗಲ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಟಕೃಷ್ಣ ರಾವ್, ದಾಮೋದರ ನಾಯ್ಕ,ಶ್ರೀಮತಿ ಭಾಗ್ಯಲಕ್ಷ್ಮೀ, ನಾರಾಯಣ ಕೆ.ಶ್ರೀಮತಿ ಯಶೋಧ
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಉಮೇಶ್ ಕೆ.ಎಂ.ಬಿ, ನಿರಂಜನ ಶೆಟ್ಟಿ ಪಾಲ್ತಾಡು, ಅಮರನಾಥ ಶೆಟ್ಟಿ ಪೆರುವಾಜೆಗುತ್ತು, ಸುಬ್ರಾಯ ಭಟ್ ನೀರ್ಕಜೆ,ಸುನಿಲ್ ರೈ ಪೆರುವಾಜೆ,ಉಪವಲಯಾರಣ್ಯಾಧಿಕಾರಿ ಪ್ರಸಾದ್, ಮಂಜಪ್ಪ ರೈ,ರಾಮಕೃಷ್ಷ ರಾವ್ ಪೆರುವಾಜೆ, ಭೋಜರಾಜ ಶೆಟ್ಟಿ,ಪ್ರದೀಪ್ ಕುಮಾರ್ ರೈ ಪನ್ನೆ, ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ವ್ಯ.ಸ.ಅಧ್ಯಕ್ಷ ವಸಂತ ನಡುಬೈಲು, ಶ್ರೀನಾಥ್ ರೈ ಬಾಳಿಲ, ಸುದಾನಂದ ಪೆರುವಾಜೆ,ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ,ಬಾಲಕೃಷ್ಣ ಆಚಾರ್ಯ, ಜಗದೀಶ ರೈ, ಸುಂದರ ನಾಯ್ಕ ನಾಗನಮಜಲು, ಕುಶಾಲಪ್ಪ ಪೆರುವಾಜೆ, ರವಿ ಪೆಲತ್ತಡ್ಕ, ರಾಮಕೃಷ್ಣ ರಾವ್, ಪ್ರೀತಂ ರೈ, ದೇವಸ್ಥಾನದ ಸಿಬ್ಬಂದಿ ವಸಂತ ಆಚಾರ್ಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


ನೂತನ ಶಾಸಕಿ ಭಾಗೀರಥಿಯವರಿಗೆ ಸನ್ಮಾನ


ನೂತನ ಶಾಸಕಿಯಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ದೇವಸ್ಥಾನಕ್ಕೆ ಆಗಮಿಸಿದ ಭಾಗೀರಥಿ ಮುರುಳ್ಯರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರು ದೇವಸ್ಥಾನದ ಪರವಾಗಿ ಭಾಗೀರಥಿ ಮುರುಳ್ಯರವರನ್ನು ಶಾಲು ಹೊದಿಸಿ ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಿದರು.