ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ -ಹಿರಿಯ ಅರ್ಚಕ ಸುಬ್ರಾಯ ಭಟ್ ರಿಗೆ ಬೀಳ್ಕೋಡುಗೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಜೂ.5 ರಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮದೊಂದಿಗೆ ಜರುಗಿತು. ಬೆಳಗ್ಗೆ ನಿತ್ಯಪೂಜೆಯಾಗಿ ಗಣಪತಿ ಹವನವಾಗಿ ಏಕದಶಾರುದ್ರಾಭಿಷೇಕ ಹಾಗೂ ವೇದಪಾರಾಯಣ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆಯಾಗಿ ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕಳೆದ15 ವರ್ಷಗಳ ಕಾಲ ದೇವಳದಲ್ಲಿ ಸಹ ಅರ್ಚಕರಾಗಿ ಸೇವೆ ಸಲ್ಲಿಸಿದ ಸುಬ್ರಾಯ ಭಟ್ ದಂಪತಿಯವರಿಗೆ ಗೌರವಾರ್ಪಣೆ ಸಮರ್ಪಿಸಿ ಬೀಳ್ಕೋಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವ್ಯವ ಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅನುವಂಶಿಕ ಮೊಕ್ತೇಸರರ ಪೈಕಿ ಶ್ರೀಪತಿ ಬೈಪಡಿತ್ತಾಯ ಆಲೆಟ್ಟಿ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ, ಜೀ.ಸ.ಪ್ರ.ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ವ್ಯ.ಸ.ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಶ್ರೀಮತಿ ಶಾಂತ ಬೈಪಡಿತ್ತಾಯ, ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ವ್ಯ.ಸ.ಸದಸ್ಯರಾದ ಜಗದೀಶ್ ಸರಳಿಕುಂಜ, ಹರಿಪ್ರಸಾದ್ ಗಬ್ಬಲ್ಕಜೆ,ಸತೀಶ್ ಕುಂಭಕ್ಕೋಡು, ಶ್ರೀಮತಿ ಮಮತ ನಾರ್ಕೋಡು,ಶ್ರೀಮತಿ ನಳಿನಿ ರೈ ಆಲೆಟ್ಟಿ, ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಉಪಸ್ಥಿತರಿದ್ದರು.


ಶ್ರೀಮತಿ ಗೌರಿ ಆಲೆಟ್ಟಿ ಪ್ರಾರ್ಥಿಸಿದರು. ವ್ಯ.ಸ.ಸದಸ್ಯ ಸತೀಶ್ ಕುಂಭಕ್ಕೋಡು ಸ್ವಾಗತಿಸಿದರು. ಭ.ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.