ಅಜ್ಜಾವರ ಜಮಾಅತ್ ಕಮಿಟಿ ವತಿಯಿಂದ ಹಜ್ಜ್ ಯಾತ್ರಿ ಹಾಜಿ ಮುಸ್ತಫಾ ಡೆಲ್ಮಾ ರವರಿಗೆ ಬೀಳ್ಕೊಡುಗೆ ಸಮಾರಂಭ

0

ಅಜ್ಜಾವರ ನೂರುಲ್ ಇಸ್ಲಾಂ ಮದರಸ ಕಟ್ಟಡ ಸಮಿತಿ ಅಧ್ಯಕ್ಷ ಮುಸ್ತಫಾ ಹಾಜಿ ಡೆಲ್ಮಾರವರಿಗೆ ಹಜ್ಜ್ ಯಾತ್ರೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಜ್ಜಾವರ ಜಮಾಅತ್ ಕಮೀಟಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜೂನ್ 5 ರಂದು ನಡೆಯಿತು.

ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ ಯವರು ದುವಾ ಆಶೀರ್ವಾದ ನಡೆಸಿದರು.

ಸಮಾರಂಭದಲ್ಲಿ ಅಬ್ದುಲ್ಲಾ ಹಾಜಿ ಪಳ್ಳಿಕ್ಕರೆ,ಅಬ್ಬಾಸ್ ಹಾಜಿ ಡೆಲ್ಮಾ,ಖಾದರ್ ಬಯಂಬು, ಇಬ್ರಾಹಿಂ ಹಾಜಿ,ಷರೀಫ್, ಮುಹಮ್ಮದ್ ಕುಂಞಿ ಮೇನಾಲ ,ಹಮೀದ್ ಬಯಂಬು ಹಾಗೂ ಮದರಸ ಅಧ್ಯಾಪಕರು, ಜಮಾಅತಿನ ಸದಸ್ಯರು ಭಾಗವಹಿಸಿದರು.


ಪ್ರ.ಕಾರ್ಯದರ್ಶಿ ಶಾಫಿ ಮುಕ್ರಿ ಸ್ವಾಗತಿಸಿ ವಂದಿಸಿದರು.