ಶಿಥಿಲಾವಸ್ಥೆಯಲ್ಲಿದ್ದ ಮನೆಗೆ ಟರ್ಪಾಲು ಅಳವಡಿಸಿ ನೆರವಾದ ರೆಂಜಾಳದ ಶಾಸ್ತಾವು ಯುವಕ ಮಂಡಲ

0

ಶ್ರಮಸೇವೆಯಲ್ಲಿ ಕೈಜೋಡಿಸಿದ ಹತ್ತಾರು ಯುವ ಮನಸ್ಸುಗಳು

ಶಿಥಿಲವಾಸ್ಥೆಯಲ್ಲಿದ್ದ ಮನೆಯೊಂದನ್ನು ಟರ್ಪಾಲು ಹಾಸುವುದರ ಮೂಲಕ ತಾತ್ಕಲಿಕ ದುರಸ್ಥಿಯನ್ನು ಮರ್ಕಂಜದ ರೆಂಜಾಳ‌ ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಮಾಡಿದ್ದಾರೆ.

ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಾಸ್ತಾವು ಯುವಕ ಮಂಡಲಕ್ಕೆ ಮರ್ಕಂಜದ ಮಿತ್ತಡ್ಕದ ಚಿತ್ರಕಲಾ ಎಂಬವರು ತಮ್ಮ‌ಮನೆ ಶಿಥಿಲಾವಸ್ಥೆಯಲ್ಲಿದ್ದು, ಇದರಲ್ಲಿ ನಾನು ಮತ್ತು ಸಣ್ಣ ಎರಡು ಮಕ್ಕಳು ವಾಸವಾಗಿದ್ದೇವೆ. ಆರ್ಥಿಕವಾಗಿ ಹಿಂದುಳಿದ ನಮಗೆ ನಮ್ಮ ಮನೆಯನ್ನು ದುರಸ್ಥಿ ಮಾಡಿಕೊಡುವಂತೆ ಶಾಸ್ತಾವು ಯುವಕ‌ ಮಂಡಲಕ್ಕೆ ಮನವಿ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಯುವಕ ಮಂಡಲದ‌ ಸದಸ್ಯರು ಟರ್ಪಾಲು ಅಳವಡಿಸಿ ತಾತ್ಕಾಲಿಕ ದುರಸ್ಥಿ ಮಾಡಿದ್ದಾರೆ.

ಈ ಶ್ರಮಸೇವೆಯಲ್ಲಿ ಮೋನಪ್ಪ ಪೂಜಾರಿ ಹೈದಂಗೂರು, ಮಂಜುನಾಥ ರೈ ರೆಂಜಾಳ, ಜಯರಾಮ ಬೇರಿಕೆ, ಶಶಿಕಾಂತ ಗುಳಿಗಮೂಲೆ, ರಾಜೇಶ ಬೇರಿಕೆ, ಮೋಹನ ನಾಯ್ಕ ರೆಂಜಾಳ, ಮನೋಹರ ರೈ ಹೈದಂಗೂರು, ಪದ್ಮನಾಭ ಗೌಡ ನಿಡ್ಯಮಲೆ, ವೆಂಕಟ್ರಮಣ ಗುಳಿಗಮೂಲೆ, ಶಶಿಧರ ಹೈದಂಗೂರು, ಗಿರೀಶ ಕೊಡಪಾಲ, ಪ್ರಶಾಂತ ಹಾರ್ನಡ್ಕ, ವಿನ್ಯಾಸ ಹೊಸೋಳಿಕೆ, ಅಜಯ್ ಕುಮಾರ್ ರೆಂಜಾಳ, ಜಯಪ್ರಕಾಶ ಬೇರಿಕೆ, ವಿಶ್ವನಾಥ ಪೈಲೂರು ಭಾಗವಹಿಸಿದ್ದರು.