ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕ್ಯಾಂಪಸ್ ಸ್ವಚ್ಚತೆ ಕಾಯಕ್ರಮ

0


ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕ್ಯಾಂಪಸ್ ಸ್ವಚ್ಚತೆ ಕಾಯಕ್ರಮ ಜೂನ್ 5ರಂದು ನಡೆಯಿತು.

ಕಾಲೇಜಿನ ಹಿರಿಯ ಜಾಡಮಾಲಿ ದಮಯಂತಿ ಇವರು ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಪೊರಕೆ ಹಸ್ತಾಂತರಿಸಿ ಉದ್ಘಾಟನೆ ನೆರವೇರಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಚಂದ್ರ ಗೌಡ ಮಾತನಾಡಿ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಜಾಡಮಾಲಿ ಯರಾದ ಶಾರದಾ ಮತ್ತು ಗೀತಾ ಅವರನ್ನು ಆಹ್ವಾನಿಸಲಾಗಿತ್ತು. ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿ ಮಮತಾ ಶುಭಹಾರೈಸಿದರು. ನೇಚರ್ ಕ್ಲಬ್ ಪದಾಧಿಕಾರಿಗಳಾದ ಕಾರ್ಯದರ್ಶಿ ಕು. ಶ್ರೇಯ, ಕೋಶಾಧಿಕಾರಿ ಮೊಹಮ್ಮದ್ ಹಾಶಿಮ್ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳಿಗೆ ಬೇಲದ ಹಣ್ಣಿನ ಗಿಡಗಳನ್ನು ನೀಡಿ ಗೌರವಿಸಲಾಯಿತು. ಕಾಲೇಜು ಕ್ಯಾಂಪಸ್ ಪೂರ್ತಿ ಓಡಾಡಿ ಇದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಚ ಗೊಳಿಸಲಾಯಿತು. ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ವಂದಿಸಿದರು. ಕು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರಾದ ಉಷಾ, ಅನಂತ ಲಕ್ಷ್ಮಿ, ಅಕ್ಷತಾ, ಕೃತಿಕಾ, ವಿಷ್ಣು ಪ್ರಶಾಂತ್, ಹರಿಪ್ರಸಾದ್, ಹರ್ಷಕಿರಣ ಮತ್ತು ಅಜಿತ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಜಯಂತಿ, ಭವ್ಯ, ಗೀತಾ, ಪವನ್ ಮತ್ತು ಶಿವಾನಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.