ಗುತ್ತಿಗಾರು : ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ

0


ಆಡಳಿತ ಮಂಡಳಿ ರಚನೆ

ಗುತ್ತಿಗಾರು ಬದ್ರಿಯಾ ಜುಮಾ ಮಸೀದಿ ಇದರ ೪೦ನೇ ವಾರ್ಷಿಕ ಮಹಾಸಭೆಯು ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಮೇ ೨೮ರಂದು ನಡೆಯಿತು.
ಜಮಾಅತ್ ನ ಅಧ್ಯಕ್ಷ ಅಬ್ಬಾಸ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಸುಲೈಮಾನ್ ಸಅದಿ ಖತೀಬರು ದುವಾ ನೆರವೇರಿಸಿದರು.
ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಸಭೆಯಲ್ಲಿ ತಿಳಿಸಲಾಯಿತು. ನಂತರ ೨೦೨೩- ೨೪ರ ವರೆಗಿನ ಮೂರು ವರ್ಷಗಳ ೧೧ ಜನ ಸದಸ್ಯರುಗಳ ಆಡಳಿತ ಮಂಡಳಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಖಾದರ್ ವಳಲಂಬೆ, ಕಾರ್ಯದರ್ಶಿಯಾಗಿ ಹಸೈನಾರ್ ವಳಲಂಬೆ, ಕೋಶಾಧಿಕಾರಿಯಾಗಿ ಮುಫೀದ್ ಬಾಕಿಲ, ಉಪಾಧ್ಯಕ್ಷರಾಗಿ ಅಬ್ಬಾಸ್ ಫುಲ್ಲಡ್ಕ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಹೆಚ್. ಎಂ. ಬಾಕಿಲ, ಲತೀಫ್ ಬಾಕಿಲ, ಸದಸ್ಯರುಗಳಾಗಿ ಅಬ್ಬಾಸ್ ವಳಲಂಬೆ, ಅಬುಸಾಲಿ ವಳಲಂಬೆ, ಮೊಯಿದು ಕುಂಞಿ ಬಾಕಿಲ, ಅಶ್ರಫ್ ವಿದ್ಯಾನಗರ, ಶಬೀರ್ ಪುಲ್ಲಡ್ಕ, ಸಲಹಾ ಸಮಿತಿಯ ಸದಸ್ಯರುಗಳಾಗಿ ಜಮಾಅತ್ ಖತೀಬರು, ಹಾಜಿ ಝಕಾರಿಯ ಕೊಲ್ಲಮೊಗ್ರ, ಅಬೂಬಕ್ಕರ್ ವಳಲಂಬೆ ಆಯ್ಕೆಯಾದರು.