ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ಬದಿಯಡ್ಕದ ಯುವ ವೈದ್ಯೆ ಆತ್ಮಹತ್ಯೆ

0

ಈ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಎಂ.ಡಿ.ಶಿಕ್ಷಣದ ಬಳಿಕ ಮರು ನೇಮಕದ ನಿರೀಕ್ಷೆಯಲ್ಲಿದ್ದ ಯುವ ವೈದ್ಯೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕ ನೀರ್ಚಾಲು ಕನ್ನೆಪ್ಪಾಡಿ ನಿವಾಸಿ, ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ಗೋಪಾಲಕೃಷ್ಣ ಭಟ್ಟರ ಪುತ್ರಿ ಡಾ. ಪಲ್ಲವಿ ಜಿ.ಕೆ. (25) ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊನ್ನೆ ರಾತ್ರಿ ಊಟ ಮಾಡಿ ತಂದೆ ತಾಯಿ ಜತೆ ಮಾತನಾಡಿ 11 ಗಂಟೆಗೆ ತನ್ನ ಕೊಠಡಿಗೆ ತೆರಳಿದ್ದರು. ಬೆಳಗ್ಗೆ 6 ಗಂಟೆ ವೇಳೆಗೆ ತಂದೆ ಎದ್ದು ಕೊಠಡಿಯತ್ತ ತೆರಳಿದಾಗ ಪುತ್ರಿ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.

ಧಾರವಾಡದ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಪಲ್ಲವಿ ರೂರಲ್ ಸರ್ವಿಸ್‌ನ ಅಂಗವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡು ಸೇವೆ ಸಲ್ಲಿಸಿದ್ದರು. ಬಳಿಕ ಎಂಡಿ ಕೋರ್ಸ್‌ನ ಪರೀಕ್ಷೆಗಾಗಿ ರಜೆಯಲ್ಲಿ ತೆರಳಿದ್ದರು. ಪರೀಕ್ಷೆ ಬರೆದು ಮರಳಿ ಮರು ನೇಮಕದ ನಿರೀಕ್ಷೆಯಲ್ಲಿದ್ದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.