ಸುಬ್ರಹ್ಮಣ್ಯ ಗ್ರಾ.ಪಂ ನೇತೃತ್ವದಲ್ಲಿ ಸುರಕ್ಷತೆಯ ಸಭೆ

0

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಭೆಗೆ ಬಾರದ ಬಗ್ಗೆ ಆಕ್ರೋಶ

ಕುಮಾರಧಾರೆ, ಕಾಶಿಕಟ್ಟೆ ಮಧ್ಯೆ 4000 ವಿದ್ಯಾರ್ಥಿಗಳು ಸಂಚರಿಸುತ್ತಾರೆ, ಸುರಕ್ಷತೆಯ ಬಗ್ಗೆ ಗಮನ ಹರಿಸಿ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಸುಬ್ರಹ್ಮಣ್ಯ ಪಟ್ಟಣದ ಭಕ್ತಾದಿಗಳ ಸುರಕ್ಷತೆ, ವಾಹನ ದಟ್ಟಣೆ, ಪಾರ್ಕಿಂಗ್ ವ್ಯವಸ್ಥೆ, ಬಗ್ಗೆ ಸಮಾಲೋಚನಾ ಸಭೆಯ ಇಂದು ನಡೆಯಿತು.

ವ್ಯವಸ್ಥೆ ಮಾಡಬೇಕಾದ, ಹೆಚ್ಚು ಅಧಿಕಾರ ಹೊಂದಿರುವ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ, ಆಡಳಿತ ಮಂಡಳಿಯ ಪ್ರತಿನಿಧಿ ಬರಬೇಕು. ಇಲ್ಲದಿದ್ದರೆ ಸಭೆ ನಡೆಸುವುದು ಬೇಡ. ಎಂದು ಶಿವರಾಮ ರೈ ಆಗ್ರಹಿಸಿದರು.

ಇದಕ್ಕೆ ಹಲವರು ಧ್ವನಿಗೂಡಿಸಿದರು. ಸುಬ್ರಹ್ಮಣ್ಯ ಕ್ಕೆ ಹಿಂದೆ ರಾಜ್ಯಪಾಲರು ಬಂದಾಗ ಕೆ.ಎಸ್. ಆರ್.ಟಿ. ಬಸ್ ಸಂಚಾರವನ್ನೆ ನಿಲ್ಲಿಸಿದರು. ಕೆ.ಎಸ್.ಆರ್.ಟಿ.ಸಿ ಯ ದಕ್ಷಿಣ ರಸ್ತೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ಪ್ರಸನ್ನ ದರ್ಬೆ ಮುಚ್ಚಿಸಿದರು. ಬಸ್ ಬರದಿದ್ದಾಗ ಅವರೆಲ್ಲಿ ಹೋದರು ಎಂದು ಕೇಳಿದರು.

ದೇವಸ್ಥಾನದ ವತಿಯಿಂದ
ರಸ್ತೆ ನಿರ್ಮಾಣ ಮಾಡುವಾಗ 18 ಕೋಟಿ ಪಾವತಿಸಿದ್ದಾರೆ. ಆದರೆ ಭೂಸ್ವಾಧೀನ ಸರಿಯಾಗಿ ಮಾಡಲಿಲ್ಲ. ನಿಟ್ಟೆ ಸದಾನಂದ ಹಾಸ್ಪಿಟಲ್ ರಸ್ತೆ ಮಧ್ಯೆ ಯೂ ಟರ್ನ್ ಅಳವಡಿಸದಿರುವುದು, ಬೀದಿ ದೀಪ ಬೆಳಕು ಕಡಿಮೆ ಹರಿಸುವ ಬಗ್ಗೆ, ಹಂಪ್ಸ್ ಅಳವಡಿಸಬೇಕೆಂಬ ಆಗ್ರಹವನ್ನು ಹರೀಶ್ ಇಂಜಾಡಿ ಮುಂದಿಟ್ಟರು.

ಕಾಶಿಕಟ್ಟೆಯಿಂದ ಕುಮಾರಧಾರ ಮಧ್ಯೆ 4000 ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಮೊನ್ನೆ ವಿದ್ಯಾರ್ಥಿಗಳ ಮೇಲೆ ಕಾರು ಹರಿದ ಅವಘಡ ಮತ್ತೆ ಮರುಕಳಿಸದಿರಲು ಹಾಗೂ ಸುರಕ್ಷತೆ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು. ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ಹಿಡಿಯುವ ಮುಂಚೆ ಎಲ್ಲಾ ವ್ಯವಸ್ಥೆ ಆಗುವಂತಾಗಲಿ ಎಂದು ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಬ್ರಹ್ಮಣ್ಯದಲ್ಲಿ ಹಲವು ಕಡೆ ದೊಡ್ಡ ಹಂಪ್ಸ್ ನ ಅವಶ್ಯಕತೆ ಇದೆ. ಹೀಗಾದರೆ ಶೇ.70 ರಷ್ಟು ಸಮಸ್ಯೆ ಪರಿಹಾರ ಆಗ್ತದೆ ಎಂದು ಗಣೇಶ್ ಪ್ರಸಾದ್ ಎನ್.‌ ತಿಳಿಸಿದರು.

ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪದ್ಮನಾಭ ಶೆಟ್ಟಿಗಾರ್, ಎಸ್ ಎಸ್ ಪಿ ಯು ಪ್ರಾಂಶುಪಾಲ ಸೋಮಶೇಖರ ನಾಯಕ್, ಗ್ರಾ.ಪಂ ಸದಸ್ಯ ರಾಜೇಶ್ ಎನ್ ಎಸ್, ಭಾರತಿ ದಿನೇಶ್, ವೆಂಕಟೇಶ್ ಎಚ್ ಎಲ್, ಎಸ್ ಐ ಮಂಜುನಾಥ್, ಪಿಡಿಒ ಆಕಾಶ್, ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ, ಕೆ.ಎಸ್.ಆರ್.ಟಿ.ಸಿ ಯವರು ವೇದಿಕೆಯಲ್ಲಿದ್ದರು. ಆಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋನಪ್ಪ ಕಾರ್ಯಕ್ರಮ ನಿರೂಪಿಸಿದರು.