” ವಿನಯ ಪೂರ್ವಕ ವಿದಾಯ ” : ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅವರ ಕುರಿತಾಗಿ ಎಂ.ಬಿ. ಸದಾಶಿವರು ಬರೆದ ಫೇಸ್ ಬುಕ್ ಪೋಸ್ಟ್ ವೈರಲ್

0

ಏನಿದೆ ಎಂ.ಬಿ.ಯವರ ಬರಹದಲ್ಲಿ? ಬರಹಕ್ಕೆ ವಿನಯಕುಮಾರ್ ನೀಡಿದ ಪ್ರತಿಕ್ರಿಯೆ ಏನು?

ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ಅವಧಿ ಮುಗಿಸಿರುವ ವಿನಯಕುಮಾರ್ ಕಂದಡ್ಕ ಅವರ ಕುರಿತಾಗಿ ಜೆಡಿಎಸ್ ನಾಯಕ ಎಂ.ಬಿ.ಸದಾಶಿವ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬರಹವೊಂದು ವೈರಲ್ ಗೆ ಕಾರಣವಾಗಿದೆ.

ಎಂ.ಬಿ. ಸದಾಶಿವ ಅವರ ಬರಹದ ಪೂರ್ಣ ರೂಪ ಇಂತಿದೆ:

” ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಸ್ಥಾನದ ಎರಡೂವರೆ ವರ್ಷಗಳ ಅವಧಿ ಮುಗಿದು ಸದ್ದಿಲ್ಲದೆ ನಿರ್ಗಮಿಸಿದ್ದಾರೆ. ಅಧಿಕಾರಾವಾದಿಯಲ್ಲಿ ಸಾಕಷ್ಟು ಸಮಾಜ ಮುಖಿಯಾಗಿ, ಕ್ರಿಯಾಶೀಲತೆ, ದಕ್ಷತೆ, ಬದ್ಧತೆಯನ್ನು ಪ್ರದರ್ಶಿಸಿ ಸುಳ್ಯದ ಜನತೆಗೆ ಭರವಸೆ ಮೂಡಿಸುವ ಹೆಜ್ಜೆಗಳನ್ನು ಊರಿದ್ದರು. ಭ್ರಷ್ಟತೆಯ ಕೂಪ ವೆನಿಸಿದ್ದ ಕಛೇರಿಯಲ್ಲಿ ಸ್ವಲ್ಪ ಮಟ್ಟಿನ ಪಾರದರ್ಶಕತೆ ಮಿಂಚಿತು. ಅವರ ವೇಗಕ್ಕೆ ಹೊಂದಿಕೆ ಆಗುವ ದಕ್ಷ ಅಧಿಕಾರಿ ಸುಧಾಕರ್ ಅವರನ್ನು ಸೇರಿಕೊಂಡದ್ದು ಜನತೆಯ ಅದೃಷ್ಟ ಎನ್ನಬೇಕು.


ಅಮರ ಸುಳ್ಯ ರಮಣೀಯ ಸುಳ್ಯ ಅನ್ನುವ ಘೋಷಣೆ ಮೊಳಗಿಸಿ ಅದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವುದು, ಆ ಚಳುವಳಿಯಲ್ಲಿ ಜನರ ಒಳಗೊಳ್ಳುವಿಕೆಗೆ ಇವರ ಪ್ರಯತ್ನ ಫಲ ನೀಡಿದೆ. ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಪ್ರಜ್ಞೆ ಮೂಡಿಸಿ ದ್ದಕ್ಕೆ ಸಾಕ್ಷಿಯಾಗಿ ಜನವರಿ 30 ರಂದು ಬೃಹತ್ ಆಂದೋಲನ ನಡೆಯಿತು.


ಕಚೇರಿ ಮುಂದೆ ಹಾಗೂ ಹಿಂದೆ ರಾಶಿ ರಾಶಿ ಪೇರಿಸಿಟ್ಟ ಕಸದ ಮೂಟೆ ಗಳನ್ನು ಸ್ವತಃ ಜಿಲ್ಲಾಧಿಕಾರಿ ಬಂದು ಗುಡುಗಿದ್ದರೂ ಕದಲಿಸಲಾಗಿರಲಿಲ್ಲ. ಇವರಿಬ್ಬರ ಸಾಹಸದ ಫಲವಾಗಿ ಇಂದು ಕಸ ಮುಕ್ತ ಕಛೇರಿ ಯಾಗಿರುವುದು ನಿಜಕ್ಕೂ ಶ್ಲಾಘನೀಯ. ಕಸವನ್ನು ಸಂಸ್ಕರಿಸಿ ಗ್ಯಾಸ್ಸಿಫಿಕೇಶನ್ ಮೂಲಕ ವೈಜ್ಞಾನಿಕ ರೀತಿಯಲ್ಲಿ ಮುಕ್ತಿ ಕಾಣಿಸುವ ಪರಿಕಲ್ಪನೆ ಪ್ರಶಂಸೆಗೆ ಅರ್ಹ. ಇದು ಶಾಶ್ವತ ಕೊಡುಗೆ ಯಾಗಿ ನೆನಪಿನಲ್ಲಿ ಉಳಿಯುತ್ತದೆ
“ಶತ್ರೊಮ್ ರಪಿ ಗುಣವಾಚ್ಯ ದೋಷಾ
ವಾಚ್ಯಾ ಗುರೋ ರಪಿ “
ಗುಣವು ಶತ್ರುವಿನಲ್ಲಿದ್ದರೂ ಅದನ್ನು ಹೇಳಬೇಕು, ದೋಷ ಗುರುವಿನಲ್ಲಿ ಇದ್ದರೂ ಹೇಳಬೇಕು.

ವಿನಯ ಮತ್ತು ನಾವು ಅನೇಕ ಸಂದರ್ಭದಲ್ಲಿ ಎದುರಾಗಿದ್ದೇವೆ ಎದುರಿಸಿದ್ದೇವೆ. ಯೌವ್ವನದ ದಿನ ಗಳಲ್ಲಿ ವಿದ್ಯಾರ್ಥಿ ಸಂಘಟನೆಯ ಹೋರಾಟದ ಮಂಚೂಣಿ ಯ ನಾಯಕನಾಗಿ ಸುಳ್ಯ ಜೂನಿಯರ್ ಕಾಲೇಜಿಗೆ ಬೀಗ ಜಡಿದ ಸಂದರ್ಭದಲ್ಲಿ ನಾವು ಮಾತಿನ ಚಕಮಕಿ ನಡೆಸಿದ್ದೆವು. ಹೇಬಿಯಸ್ ಕಾರ್ಪಸ್ ಪ್ರಕರಣ ವೊಂದರಲ್ಲಿ ಬೇಕಾಗಿದ್ದ ವ್ಯಕ್ತಿ ಗೆ ನಾನು ಆಶ್ರಯ ನೀಡಿದ್ದೇನೆಂದು ಆರೋಪಿಸಿ ನನ್ನ ವಿರುದ್ದ ಉಗ್ರ ಬಾಷಣ ಮಾಡಿದ್ದರು. (ವಯಸ್ಸು ಮತ್ತು ತಾಳ್ಮೆ ಯ ಪ್ರಬುದ್ಧತೆಯಿಂದ ನಾನು ಸಂಯಮ ದಿಂದ ಅದೇ ಪ್ರತಿಕ್ರಿಯೆ ನೀಡಿರಲಿಲ್ಲ )


ಹೋರಾಟ ಬೆಂಕಿ ಉಗುಳುವ ಪ್ರಖರತೆ ಯ ಭಾಷಣ, ಸಂಘಟನೆ ಗಳಿಂದ ವಿನಯ ಕಟೀಯಾರ್ ತರಹ ಕಾಣಿಸಿಕೊಂಡಿದ್ದರು. ಸಂಘರ್ಷ ಸಂಘಟನೆ ಸಂಪರ್ಕಗಳ ಮೂಲಕ ಅರ್ಹವಾಗಿ ಈ ಸ್ಥಾನಕ್ಕೆ ಏರಿದರು . ಆಯ್ಕೆಯಾದ ಬಳಿಕ ಎಚ್ಚರಿಕೆಯ ಹೆಜ್ಜೆ ಹಾಕತೊಡಗಿದರು. ಸಂಯಮ ತಾಳ್ಮೆ ಹೊಂದಾಣಿಕೆ ಗಳು ಇವರ ನಡೆ ನುಡಿಯಲ್ಲಿ ಕಾಣತೋಡ ಗಿತ್ತು. ಸಾರ್ವಜನಿಕ ಸಮಸ್ಯೆ ಗಳು ಎದುರಾದಾಗ, ದೂರುಗಳು ಬಂದಾಗ ಸ್ವತಃ ಧಾವಿಸಿ ಸ್ಥಳದಲ್ಲೇ ಪರಿಹಾರ ಕಾಣುವ ಪ್ರಯತ್ನ ಮಾಡಿದರು. ನೀರು ಪೋಲಾಗದಂತೆ ತಡೆದರು, ನೀರಿನ ಅಭಾವ ಆಗದಂತೆ ನೋಡಿಕೊಂಡರು. ಟ್ಯೂಬ್ ಲೈಟ್ ಪ್ರಕರಣ ಸೇರಿದಂತೆ ಹಲವು ಸಂದರ್ಭದಲ್ಲಿ ದೊಡ್ಡ ಪ್ರತಿರೋಧ ತೋರದೆ ಸoಭಾಳಿಸಿದರು. ಸದಸ್ಯರ ಮಧ್ಯೆ ಸಮನ್ವಯತೆ ಸಾಧಿಸಿದರು ತಂಡ ವಾಗಿ ಕೆಲಸ ಮಾಡಿದರು. ಪ್ರತೀ ಪಕ್ಷದವರು ಕೂಡ ಅಂತ ದೊಡ್ಡ ಧ್ವನಿ ಎತ್ತಿದ ಸಂದರ್ಭ ವಿರಲಿಲ್ಲ. ಹಾಲಿ ಮುಖ್ಯಧಿಕಾರಿಗಳ ಅನುಭವ ಮತ್ತು ದಕ್ಷತೆ ಇವರಿಗೆ ಹೆಚ್ಚಿನ ಶಕ್ತಿ ತುಂಬಿತು. ಮರಳು ಚೀಲಗಳ ಒಡ್ದು ನಿರ್ಮಿಸುತ್ತಿದ್ದ ನೀರಿನ ಟ್ಯಾಂಕ್ ಬಳಿ ಶಾಶ್ವತ ವಾದ ಕಿಂಡಿ ಆಣೆಕಟ್ಟು ತಲೆ ಎತ್ತಿತು. ಇಂತಹ ಅನೇಕ ಪ್ರಗತಿ ಸಾಧ್ಯವಾಯಿತು. ಇವರ ಬಗ್ಗೆ ಬರೆದು ನನಗೆ ಏನೂ ಆಗಬೇಕಿಲ್ಲ.

ಆದರೆ “ಗುಣ :ಪೂಜಾಸ್ಥಾನಮ್ ಗುಣಿಷು ನ ಲಿಂಗಾನಮ್ ನ ಚವಾಯಃ ಗುಣವಂನಷ್ಟೇ ಕಾಣಬೇಕಂತೆ ಲಿಂಗವನ್ನೂ ವಯಸ್ಸನ್ನಾಗಲಿ ಅಲ್ಲ ಎಂದಿದೆ ಸುಭಾಷಿತ (ಇಲ್ಲಿ ಪಕ್ಷ ಅಥವಾ ಸಿದ್ದಾಂತ ವೆಂದು ತಿಳಿದು ಕೊಳ್ಳೋಣ )ವಿನಯಕುಮಾರ್ ರವರಿಗೆ ಅವರ ನಿಸ್ಪ್ರಹ ಸೇವೆಗೆ ಅಭಿನಂದನೆಗಳನ್ನು ಸುಳ್ಯದ ಜನತೆ ಸಲ್ಲಿಸಬೇಕು. ಕನಿಷ್ಠ ನನ್ನ ಸಣ್ಣ ಧ್ವನಿಯಾದರು ಧಾಕಲಾಗಲಿ
ನನ್ನ ತಂದೆಯವರು ಇದೆ ಹುದ್ದೆಯಲ್ಲಿ ಎರಡು ಅವಧಿ ಸೇವೆ ಸಲ್ಲಿಸಿದ್ದರು. ಅದರ ಮುಳ್ಳಿನ ಕುರ್ಚಿಯ ಅಲಗಿನ ಹರಿತದ ಅರಿವಿದೆ. ಅವರಾಗಿಯೇ ರಾಜಿ ಎಸೆದು ಹುದ್ದೆ ತ್ಯಜಿಸಿದ್ದರು!!


“ಉತ್ಸಾಹಸ್ ಸಂಪನ್ನಂ ದೀರ್ಘಸೂತ್ರ ವ್ಯಸಣಿಸ್ತ ಸಕ್ತ್ಟಂ ಶೂರಮ್ ಕೃತಜ್ಞಮ್ ದೃಢ ಸಹೃದಮ್ ಚ ಸಿದ್ದಿ ಸ್ವಯಂ ಗಚ್ಚತಿ
ಉತ್ಸಾಹಶೀಲನಾದ, ವಿಳಂಬವಿಲ್ಲದೆ ಕೆಲಸ ಮಾಡುವ ಕಾರ್ಯ ಪದ್ಧತಿ ತಿಳಿದಿರುವ ಶೂರ ಹಾಗೂ ಕೃತಜ್ಞನಿಗೆ ಯಶಸ್ಸು ಸಿದ್ದಿಸುತ್ತದೆ ಎಂಬುದನ್ನು ನಿರೂಪಿಸಿದ ವಿನಯ ರಿಗೆ ವಿದಾಯ ಕೋರುತ್ತಿದ್ದೇನೆ. ಮತ್ತೆ ಸೇವೆಯ ಅವಕಾಶ ಅರಸಿ ಬರಲಿ”

ಹೀಗೆ ಹಾಕಿದ ಎಂ.ಬಿ.ಯವರ ಬರಹಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ. ಪಕ್ಷ ಬೇಧ ಹೊಂದಿದ್ದರೂ, ರಾಜಕೀಯ ವಿರೋಧಿಯಾಗಿದ್ದರೂ ಬರೆದ ಈ ಬರಹ ರಾಜಕೀಯ ಮುತ್ಸದ್ಧಿತನದ ಪ್ರತೀಕ ಎಂದು ಅನೇಕರು ಹೇಳಿದ್ದಾರೆ.

ವಿನಯರ ಕೆಲಸಗಳಿಗಾಗಿ ಅನೇಕರು ಕಾಮೆಂಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಎಂ.ಬಿ.ಯವರ ಬರಹಕ್ಕೆ ಪ್ರತಿಕ್ರಿಯಿಸಿರುವ ವಿನಯಕುಮಾರ್ ಕಂದಡ್ಕ, ” ಧನ್ಯವಾದಗಳು ಎಂ ಬಿ ಸದಾಶಿವರವರಿಗೆ.
ಸಾಧಿಸಿದ್ದು ಸ್ವಲ್ಪ ಮಾತ್ರ. ಸುಳ್ಯ ನಗರ ಪಂಚಾಯತ್ ನಲ್ಲಿ, ಆಡಳಿತ ವ್ಯವಸ್ಥೆ ಯಲ್ಲಿ ಸಾಧಿಸಬಹುದಾದದ್ದು ಬಹಳವಿದೆ. ಅಲ್ಪ ಕಾಲದ ಸ್ವಲ್ಪ ಪ್ರಯತ್ನ ಗುರುತಿಸಿದ್ದಕ್ಕೆ ಮತ್ತೊಮ್ಮೆ ಕೃತಜ್ಞತೆಗಳು” ಎಂದು ಕಾಮೆಂಟ್ ಹಾಕಿದ್ದಾರೆ.

” ಆವತ್ತು ರೇಡಿಯೋ ಜಾಕಿಯಾಗಿದ್ದ ಪಂಜದವರೊಬ್ಬರು ಟ್ರೋಲ್ ಮಾಡಿದಾಗ ತಪ್ಪನ್ನು ಒಪ್ಪಿಕೊಳ್ಳದೇ ಕರೆ ಮಾಡಿ ಧಮ್ಕಿ ಹಾಕಿದವರು ಇವರೇ ಅಲ್ಲವೇ?” ಎಂದೂ ಒಬ್ಬರು ಪ್ರತಿಕ್ರಿಯಿಸಿದ್ದಾರೆ.