ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಉತ್ತೀರ್ಣ

0

ವಿನೋಬನಗರದ ವಿವೇಕಾನಂದ ಆಂಗ್ಲಮಾದ್ಯಮ ಪ್ರೌಢಶಾಲಾ ಫಲಿತಾಂಶ ಶೇ.94 ಕ್ಕೆ ಏರಿಕೆ

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲ ಮಾದ್ಯಮ ಪ್ರೌಢ ಶಾಲೆಗೆ ಎಸ್. ಎಸ್. ಎಲ್. ಸಿ. ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಮೂರು ಜನ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಫಲಿತಾಂಶವು ಶೇಕಡಾ 88 ರಿಂದ ಶೇಕಡಾ 94 ಏರಿಕೆಯಾಗಿದೆ.

ಮರು ಮೌಲ್ಯಮಾಪನದಲ್ಲಿ ಶಾಲಾ ವಿದ್ಯಾರ್ಥಿಗಳಾದ ಅಮೃತ್ ಡಿ. ಎನ್. , ಜೀವನ್ ಕೆ., ಜಸ್ಮಿತಾ ಕೆ. ಅವರು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಾಗಿದ್ದಾರೆ.
ಶಾಲೆಯಲ್ಲಿ 595 ಅಂಕ ಪಡೆದು ಅಗ್ರ ಸ್ಥಾನಿಯಾಗಿದ್ದ ವಿದ್ಯಾರ್ಥಿನಿ ನಿಶ್ಮಿತಾ ಹೆಚ್ ಯು. ಅವರು ಮರುಮೌಲ್ಯಮಾಪನದಲ್ಲಿ 6 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ತನ್ನ ಅಂಕವನ್ನು 601 ಕ್ಕೆ ಏರಿಸಿ ಕೊಂಡಿದ್ದಾರೆ.

ಒಟ್ಟಾರೆ ಫಲಿತಾಂಶದಲ್ಲಿ ಸಮಾಜವಿಜ್ಞಾನ ವಿಷಯದಲ್ಲಿ ಶಾಲೆಯು 100 ಶೇಕಡಾ ಫಲಿತಾಂಶವನ್ನು ದಾಖಲಿಸಿದೆ.