ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬೆಳ್ಳಾರೆ ವಲಯದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ

0

ಯುವಶಕ್ತಿಯಿಂದ ದೇಶ ಕಟ್ಟುವ ಕೆಲಸ – ಶ್ರೀ ಗುರುದೇವಾನಂದ ಸ್ವಾಮೀಜಿ

“ಸಮಾಜದ ಪರಿವರ್ತನೆಗೆ ಸಂಘ ಸಂಸ್ಥೆಗಳು ಪೂರಕವಾಗಿದೆ.ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ.ಯುವ ಶಕ್ತಿಯಿಂದ ದೇಶ ಕಟ್ಟುವ ಕೆಲಸ ಆಗಬೇಕು” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜೂ.07 ರಂದು ನಡೆದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ,ಒಡಿಯೂರು ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬೆಳ್ಳಾರೆ ವಲಯದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.


ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ದೀಪ ಬೇಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಒಡಿಯೂರು ಶ್ರೀ ಗ್ರಾ.ವಿ.ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆ,ಆರ್ಥಿಕ ಬಲವರ್ಧನೆ,ಸಂಘಟನೆ ಬಗ್ಗೆ ಮಾತನಾಡಿದರು.


ನಿಂತಿಕಲ್ಲಿನಲ್ಲಿ ಒಡಿಯೂರು ಸಹಕಾರಿ ಸಂಘ ಸ್ಥಾಪನೆ ಮಾಡಲಾಗುವುದು ಇದರಿಂದ ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ


ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕರಾದ ಶ್ರೀಧರ ಗೌಡ ಕಡೀರ, ರಾಷ್ಟ್ರೀಯ ಕ್ರೀಡಾಪಟು ಆನಂದ ಕಲ್ಮಡ್ಕ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಪ್ರವೀಣ್ ಬೆಳ್ಳಾರೆ, ಮಾಜಿ ಸೈನಿಕ ಶ್ರೀಧರ ದೇವರಕಾನರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಶಾಸಕರಿಗೆ ಸನ್ಮಾನ
ನೂತನ ಶಾಸಕಿ ಭಾಗೀರಥಿ ಮುರುಳ್ಯರವರನ್ನು ಸ್ವಾಮೀಜಿಯವರು ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಿದರು.
ನೂತನ ಘಟಸಮಿತಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು.
ಉತ್ತಮ ತಂಡಗಳ ಗುರುತಿಸುವಿಕೆ ನಡೆಯಿತು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ,
ಮುರುಳ್ಯ ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಮಹಾಬಲ ರೈ ಕೊಡ್ಡೋಳು,ತಾಲೂಕು ಘಟ ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ಸಹಕಾರಿ ಸಂಘದ ನಿರ್ದೇಶಕಿ ಶಾರದಾಮಣಿ ಎಸ್.ರೈ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ವಿಶ್ವನಾಥ ರೈ ಕಳಂಜ ,ತಾಲೂಕು ಘಟ ಸಮಿತಿ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ರೈ ಸುಳ್ಯ ಉಪಸ್ಥಿತರಿದ್ದರು.


ಬೆಳ್ಳಾರೆ ವಲಯ ಘಟ ಸಮಿತಿ ನಿಕಟಪೂರ್ವ ಅಧ್ಯಕ್ಷ ವೀರನಾಥ ಪಡ್ಪು ಸ್ವಾಗತಿಸಿ, ವಂದಿಸಿ, ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಸತ್ಯದತ್ತ ವೃತ ಪೂಜೆ ನಂತರ ಭಜನೆ ಗುರುದೇವ ಮಹಿಳಾ ಭಜನಾ ಮಂಡಳಿ ಐವರ್ನಾಡು ಮತ್ತು ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಅಜಪಿಲ ಇವರಿಂದ ನಡೆಯಿತು.


ಒಡಿಯೂರು ಗ್ರಾಮ ವಿಕಾಸ ಯೋಜನೆಯ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.