ಅಮರಮುಡ್ನೂರು: ಪಂಚಾಯತ್ ವತಿಯಿಂದ ವಾಹನದಲ್ಲಿ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆ

0

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮರಪಡ್ನೂರು ಗ್ರಾಮದ ನೇಣಾರು ಹಾಗೂ ಶೇಣಿ ದೇರಾಜೆ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 15 ಮನೆಗಳಲ್ಲಿ ನೀರಿನ ಅಭಾವ ತಲೆದೋರಿದ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದ ದಿನ ನಿತ್ಯ ವಾಹನದಲ್ಲಿ ನೀರಿನ ಟ್ಯಾಂಕ್ ಅಳವಡಿಸಿ ಮನೆಗೆ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆ ನಿರ್ವಹಿಸಲಾಗುತ್ತಿದೆ.


ಕಳೆದೆರಡು ತಿಂಗಳಿನಿಂದ ನೀರಿನ ಸಮಸ್ಯೆ ಎದುರಾಗಿದ್ದು ಪಂಚಾಯತ್ ಸಿಬ್ಬಂದಿ ಗಳು ಸ್ಥಳೀಯ ಪಂ.ಸದಸ್ಯರಾದ ಅಶೋಕ ಚೂಂತಾರು ರವರ ಮತ್ತು ಸ್ಥಳೀಯ ನಿವಾಸಿಗಳಾದ ಜೋಗಿಯಡ್ಕ ಪ್ರಾರ್ಥನಾ ಮತ್ತು ಶಿವ ಅಳಗಿನಡ್ಕ ಎಂಬವರ ಸ್ವಂತ ಬೋರ್ ವೆಲ್ ನಿಂದ ನೀರನ್ನು ಸಿಂಟೆಕ್ಸ್ ಟ್ಯಾಂಕಿಗೆ ತುಂಬಿಸಿ ಪಂಚಾಯತ್ ವಾಹನದಲ್ಲಿ ಇರಿಸಿಕೊಂಡು ಅಗತ್ಯವಿರುವ ಮನೆ ಬಾಗಿಲಿಗೆ ದಿನಕ್ಕೆ ಅವಶ್ಯವಿರುವಷ್ಟು ನಿರನ್ನು ಸರಬರಾಜು ಮಾಡುವ ಕಾರ್ಯಕೈಗೆತ್ತಿಕೊಂಡಿರುತ್ತಾರೆ.

ಇದರಿಂದ ಈ ಭಾಗದ ನಿವಾಸಿಗಳು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಿ.ಡಿ.ಒ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸುತ್ತಿದ್ದಾರೆ.