ಕಲ್ಮಡ್ಕ ಶ್ರೀರಾಮ ಮಂದಿರಕ್ಕೆ ಅರುಣ್ ಪುತ್ತಿಲ ಭೇಟಿ

0

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಜೂನ್ 07 ರಂದು ಕಲ್ಮಡ್ಕಕ್ಕೆ ಭೇಟಿ ನೀಡಿದರು.
ಕಲ್ಮಡ್ಕದ ಶ್ರೀ ರಾಮ ಭಜನಾ ಮಂದಿರದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಿದರು. ಮೆರವಣಿಗೆಯ ಮೂಲಕ ಪುತ್ತಿಲರಿಗೆ ಸ್ವಾಗತ ಕೋರಲಾಯಿತು.


ಹಿರಿಯ ಮುಖಂಡ ರಾಜಾರಾಂ ಭಟ್ ಎಡಕ್ಕಾನ, ಕಲ್ಮಡ್ಕ ಸಹಕಾರಿ ಸಂಘದ ಅಧ್ಯಕ್ಷ ಉದಯ್ ಕುಮಾರ್ ಬೆಟ್ಟ, ಶ್ರೀರಾಮ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಕೆ.ಎನ್.ಪರಮೇಶ್ವರಯ್ಯ, ಗ್ರಾಪಂ ಸದಸ್ಯೆ ಮೀನಾಕ್ಷಿ ಬಾಲಕೃಷ್ಣ ನಾಯ್ಕ, ಸರಸ್ವತಿ ಕಟ್ಟೆಹಿತ್ಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯ ಹರೀಶ್ ಮಾಳಪ್ಪಮಕ್ಕಿ‌ ಸ್ವಾಗತಿಸಿ, ಸಾಯಿನಾರಾಯಣ ವಂದಿಸಿದರು.
ಅನೇಕ ಸಂಖ್ಯೆಯಲ್ಲಿ ಪುತ್ತಿಲ ಅಭಿಮಾನಿಗಳು ನೆರೆದಿದ್ದರು.